

ಲಕ್ಷ್ಮೇಶ್ವರ: ದೇಶ ವಿದೇಶಗಳಲ್ಲಿ ಭಾವೈಕ್ಯದ ಕೇಂದ್ರವೆಂದೇ ಪ್ರಸಿದ್ಧಿಯಾಗಿರುವ ಪಟ್ಟಣದ ದೂದಪೀರಾಂ ದರ್ಗಾ ಅಭಿವೃದ್ಧಿಗೆ ವಕ್ಪ್ ಮಂಡಳಿ ಹಾಗೂ ಸರ್ಕಾರದಿಂದ ಅವಶ್ಯವಿರುವ ಎಲ್ಲ ನೆರವು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ರಾಜ್ಯ ವಕ್ಪ್ ಬೋರ್ಡ್ ಮಂಡಳಿ ಅಧ್ಯಕ್ಷ ಹಾಪೀಜ್ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೈನಿ ಭರವಸೆ ನೀಡಿದರು.
ಪಟ್ಟಣದ ದೂದಪೀರಾಂ ದರ್ಗಾದ ಶಾದಿಮಹಲ್ನಲ್ಲಿ ರಾಜ್ಯ ವಕ್ಪ್ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಾಫೀಜ್ ಸೈಯದ್ ಮೊಹ್ಮದ್ ಅಲಿ ಅಲ್-ಹುಸೈನಿ ಅವರನ್ನು ಪಟ್ಟಣದ ದೂದಪೀರಾಂ ದರ್ಗಾ ಕಮಿಟಿ ಮತ್ತು ಅಂಜುಮನ್ ಎ-ಇಸ್ಲಾಂ ಕಮಿಟಿಯಿಂದ ಶುಕ್ರವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ದರ್ಗಾಕ್ಕೆ ತನ್ನದೆ ಆದ ವೈಶಿಷ್ಟತೆ ಇದ್ದು, ದರ್ಗಾಗಳಲ್ಲಿ, ಮುತ್ತುವಲ್ಲಿಗಳಾಗಲಿ, ಕಮಿಟಿಗಳಾಗಲಿ ಎಲ್ಲಿಯೇ ಕಾರ್ಯ ನಿರ್ವಹಿಸಿದರೂ ಪ್ರಾಮಾಣಿಕವಾಗಿ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಕೆಪಿಸಿಸಿ ಸದಸ್ಯ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ಸಮಾಜದಲ್ಲಿ ಎಲ್ಲ ಸಮಾಜಗಳೊಂದಿಗೆ ಹೊಂದಿಕೊಂಡು ಸಾಗಬೇಕು. ಲಕ್ಷೆ್ಮೕಶ್ವರಕ್ಕೆ ಅಲ್ಪಸಂಖ್ಯಾತರ ಇಲಾಖೆಯಿಂದ 2 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಲೀಂ ಅಹಮ್ಮದ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ರ್ಚಚಿಸಿ ಆರ್ಥಿಕ ನೆರವು ದೊರಕಿಸಿಕೊಡುವ ಭರವಸೆ ನೀಡಿದರು.
ಆಶೀಫ ಅಲಿ ಹೀರಾಹುಸೇನ್, ಕೆಪಿಸಿಸಿ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಉಪಾಧ್ಯಕ್ಷ ಪೀರದೋಷ ಆಡೂರ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕರಡಿ, ಜಯಕ್ಕ ಕಳ್ಳಿ, ಹುಮಾಯೂನ್ ಮಾಗಡಿ, ಎಂ.ಎಂ. ಗದಗ, ಡಾ. ಅಬ್ದುಲ್ಕರೀಂ ಪಟವೇಗಾರ, ಸುಲೇಮಾನ ಕಣಕೆ, ಸೈಯದ್ಅಲಿ ಹುಸೇನ್ ಹೈದರಲಿ, ದಿಶಾಂತ ಪಠಾಣ, ಮಾಜಿ ಶಾಸಕ ರಾಮಣ್ಣ ಲಮಾಣಿ, ದಾದಾಪೀರ ಮುಚಾಲೇ, ವೀರಯ್ಯ ಮಠಪತಿ, ಸಾಹೇಬ್ಜಾನ್, ಹವಾಲ್ದಾರ್ ನಜೀರ್ಅಹ್ಮದ್ ಗದಗ, ಎ.ಜಿ. ಸೂರಣಗಿ, ಕರೀಂಖಾನವರ, ಇಮ್ರಾನ್ ಪೀರಜಾದೆ, ಆಸೀಫ್ ಅಲಿ, ಇತರರಿದ್ದರು.