ವೀರಶೈವ ಲಿಂಗಾಯತ ಭವನ ನಿರ್ಮಾಣಕ್ಕೆ ನೆರವು

6
Published on

ಮೈಸೂರು: ನಗರದ ಜೆಎಸ್‌ಎಸ್ ಬಡಾವಣೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದಿಂದ ನಿರ್ಮಾಣಗೊಳ್ಳಲಿರುವ ಭವನ ನಿರ್ಮಾಣಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾದಿಂದ ನೆರವು ನೀಡಲಾಯಿತು.

ಮಹಾಸಭಾದ ಹಿರಿಯ ಉಪಾಧ್ಯಕ್ಷ, ಮಹಾಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಚಿವ ಈಶ್ವರ ಖಂಡ್ರೆ ಅವರು, ಮಹಾಸಭಾದಿಂದ ಸದಸ್ಯತ್ವದ ಶೇ.90 ಅಂದರೆ 50,22,000 ರೂ.ಮೊತ್ತ ಹಾಗೂ ಬಡ್ಡಿ ರಹಿತವಾಗಿ 50 ಲಕ್ಷ ರೂ.ಚೆಕ್ ಅನ್ನು ನಗರದಲ್ಲಿ ಶನಿವಾರ ಜಿಲ್ಲಾ ಘಟಕದ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಹಿನಕಲ್ ಬಸವರಾಜು, ಪ್ರಧಾನ ಕಾರ್ಯದರ್ಶಿ ದೂರ ಶಿವಕುಮಾರ್, ಕೇಂದ್ರ ಸಮಿತಿ ಸದಸ್ಯ ಖಂಡೇಶ್, ಉಪಾಧ್ಯಕ್ಷರಾದ ಕೆ.ನಾಗರಾಜು, ಬಸವರಾಜು, ನಟರಾಜು, ಕಾರ್ಯದರ್ಶಿ ಗಿರೀಶ್, ಅನುಸೂಯ ಗಣೇಶ್, ಸಂಘಟನಾ ಕಾರ್ಯದರ್ಶಿ ಪರಮೇಶ್, ಮುಖಂಡರಾದ ಗೆಜ್ಜಗಳ್ಳಿ ಮಹೇಶ್, ಮಂಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net