ವಿಠ್ಠಲಾಪುರದಲ್ಲಿ ದೇಗುಲ ನಿರ್ಮಾಣಕ್ಕೆ ನೆರವು

ಧರ್ಮಸ್ಥಳದ ಸಮುದಾಯ ಅಭಿವೃದ್ಧಿ ಯೋಜನೆ
ವಿಠ್ಠಲಾಪುರ ಗ್ರಾಮದಲ್ಲಿ ಶ್ರೀ ಕೈಲಾಸ ಮಲ್ಲೇಶ್ವರ ದೇವಸ್ಥಾನ ನಿರ್ಮಾಣ ಕಾಮಗಾರಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಸಮುದಾಯ ಅಭಿವೃದ್ಧಿ ಯೋಜನೆಯಡಿ 1,50,000 ರೂ. ಮೊತ್ತದ ಡಿಡಿಯನ್ನು ತಾಲೂಕು ಯೋಜನಾಧಿಕಾರಿ ಅಕ್ಷತಾ ರೈ ದೇವಾಲಯ ಸಮಿತಿಗೆ ಹಸ್ತಾರಿಸಿದರು. ಚಂದ್ರೇಗೌಡ, ನಿಂಗನಾಯಕ್, ಚೈತ್ರಾ, ಪಲ್ಲವಿ ಇದ್ದರು.
Published on

ಅರಸೀಕೆರೆ ಗ್ರಾಮಾಂತರ: ತಾಲೂನ ವಿಠ್ಠಲಾಪುರ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಕೈಲಾಸ ಮಲ್ಲೇಶ್ವರ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಸಮುದಾಯ ಅಭಿವೃದ್ಧಿ ಯೋಜನೆಯಡಿ 1,50,000 ರೂ. ಮೊತ್ತದ ಡಿಡಿಯನ್ನು ತಾಲೂಕು ಯೋಜನಾಧಿಕಾರಿ ಅಕ್ಷತಾ ರೈ ದೇವಾಲಯ ಸಮಿತಿಗೆ ಸೋಮವಾರ ಹಸ್ತಾರಿಸಿದರು.

ಬಳಿಕ ಮಾತನಾಡಿ, ಶ್ರೀ ಕ್ಷೇತ್ರವು ಅನೇಕ ಜನಪರ ಕಾರ್ಯಕ್ರಮ, ಯೋಜನೆಗಳನ್ನು ಜಾರಿಗೆ ತಂದಿದ್ದು ಶ್ರೀ ಕ್ಷೇತ್ರ ಧರ್ಮಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಎಲ್ಲವೂ ಸೋಲಲಿತವಾಗಿ ನಡೆಯುತ್ತಿದೆ. ಕುಡಿಯುವ ನೀರು, ಸ್ವಚ್ಛತೆ, ದೇವಾಲಯಗಳ ನಿರ್ಮಾಣ, ಶಾಲಾ ಕೊಠಡಿ ನಿರ್ಮಾಣ, ವಿದ್ಯಾರ್ಥಿಯಾಗಿ ಪೀಠೋಪಕರಣ, ಮನೆ ವಿತರಣೆ, ಮಾಶಾಸನ, ಮಹಿಳಾ ಸಬಲೀಕರಣಕ್ಕಾಗಿ ಆರ್ಥಿಕ ನೆರವು ನೀಡುವ ಮೂಲಕ ಸಾಮಾಜಿಕ ಕಾರ್ಯಗಳು ನಡೆಸಲಾಗುತ್ತಿದೆ.

ಗ್ರಾಮದಲ್ಲಿ ದೇವಾಲಯ ನಿರ್ಮಾಣಕ್ಕಾಗಿ ಆರ್ಥಿಕ ನೆರವನ್ನು ಶ್ರೀ ಕ್ಷೇತ್ರದಲ್ಲಿ ಮನವಿ ಮಾಡಿದ್ದರು. ಅದರಂತೆ 1,50,000 ರೂ. ಡಿಡಿಯನ್ನು ಕರುಣಿಸಿದ್ದಾರೆ. ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಗ್ರಾಮಸ್ಥರಲ್ಲೂ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ ಎಂದರು

ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರೇಗೌಡ, ವಲಯದ ಮೇಲ್ವಿಚಾರಕ ನಿಂಗನಾಯಕ್, ಸೇವಾ ಪ್ರತಿನಿಧಿಗಳಾದ ಚೈತ್ರಾ, ಪಲ್ಲವಿ, ದೇವಾಲಯದ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net