ಕುಟುಂಬ ನೆರವು ಯೋಜನೆಯಡಿ ಫಲಾನುಭವಿಗಳಿಗೆ ಸಹಾಯ ಧನ

999999
Published on

ಚಿಕ್ಕಬಳ್ಳಾಪುರ: ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ 277 ಲಾನುಭವಿಗಳಿಗೆ ಸಹಾಯಧನ ಮಂಜೂರಾಗಿದೆ.

ಜಿಲ್ಲೆಯಲ್ಲಿ ನೆರವಿಗೆ 381 ಅರ್ಜಿಗಳು (2024 ನೇ ಸಾಲಿನ ಜುಲೈನಿಂದ ನವೆಂಬರ್ ವರೆಗೆ) ಸಲ್ಲಿಕೆಯಾಗಿದ್ದವು. ಇದರ ಪೈಕಿ ಅರ್ಹ 277 ಅರ್ಜಿಗಳನ್ನು ಪರಿಶೀಲಿಸಿ, ಬ್ಯಾಂಕ್ ಮೂಲಕ ನೆರವು ಒದಗಿಸಲಾಗಿದೆ.

ಸಾಮಾಜಿಕ ಭದ್ರತಾ ಯೋಜನೆಯಡಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಕುಟುಂಬ ನೆರವಿನ ಸೌಲಭ್ಯವನ್ನು ಒದಗಿಸುತ್ತಿದ್ದು ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬದ ಮುಖ್ಯಸ್ಥನ ಮರಣವಾದಲ್ಲಿ ಒಮ್ಮೆತಲಾ 20 ಸಾವಿರ ರೂ ಸಹಾಯಧನವನ್ನು ನೀಡಲಾಗುತ್ತದೆ.

*ಕುಟುಂಬಕ್ಕೆ ಆಸರೆ

ಸಾಮಾಜಿಕ ಭದ್ರತಾ ಯೋಜನೆಯಡಿ ವೃದ್ಧಾಪ್ಯ, ಅಂಗವಿಕಲ, ವಿಧವಾ ಸೇರಿದಂತೆ ಸರ್ಕಾರವು ಮಾಸಾಶನವನ್ನು ಒದಗಿಸುತ್ತಿದೆ. ಅದರಂತೆ ಕುಟುಂಬದಲ್ಲಿನ ಯಜಮಾನ ಮೃತಪಟ್ಟ ಸಂದರ್ಭದಲ್ಲಿ ಆರ್ಥಿಕ ಆಸರೆಗಾಗಿ ಸಹಾಯಧನವನ್ನು ಒದಗಿಸುವುದೇ ರಾಷ್ಟ್ರೀಯ ಕುಟುಂಬ ನೆರವು ಯೋಜನೆ. ಇದಕ್ಕೆ ಕುಟುಂಬದ ಯಜಮಾನನ ಮರಣ ನೋಂದಣಿ ಪತ್ರ, ಪಡಿತರ ಚೀಟಿ, ವಾಸಸ್ಥಳ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net