ಕಾಯಂ ಉಪ ತಹಸೀಲ್ದಾರ್ ನಿಯೋಜಿಸಿ

15 HBH 01
ಹಗರಿಬೊಮ್ಮನಹಳ್ಳಿಯಲ್ಲಿ ತಹಸೀಲ್ದಾರ್ ಚಂದ್ರಶೇಖರ ಶಂಬಣ್ಣ ಗಾಳಿಗೆ ತಂಬ್ರಹಳ್ಳಿ ರೈತ ಮುಖಂಡರು ಮನವಿ ಸಲ್ಲಿಸಿದರು. ಪ್ರಮುಖರಾದ ಮೈನಳ್ಳಿ ಕೊಟ್ರೇಶ್, ಅಳವಂಡಿ ಸಿದ್ದಾರೆಡ್ಡಿ, ಚಂದ್ರಶೇಖರ, ಯು.ಸಕ್ರಪ್ಪ, ಪೂಜಾರ್ ಸಿದ್ದಪ್ಪ ಇತರರಿದ್ದರು.
Published on

ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ನಾಡಕಚೇರಿಗೆ ಕಾಯಂ ಉಪತಹಸೀಲ್ದಾರ್ ನೇಮಕಗೊಳಿಸುವಂತೆ ಒತ್ತಾಯಿಸಿ ರೈತ ಮುಖಂಡರು ತಹಸೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿಗೆ ಮನವಿ ಸಲ್ಲಿಸಿದರು.

ರೈತ ಮುಖಂಡ ಮೈನಳ್ಳಿ ಕೊಟ್ರೇಶಪ್ಪ ಮಾತನಾಡಿ, ನಾಡಕಚೇರಿಯ ಉಪತಹಸೀಲ್ದಾರ್ ಅವರನ್ನು ಪಟ್ಟಣದ ತಾಲೂಕು ಕಚೇರಿಗೆ ನಿಯೋಜಿಸಿರುವ ಹಿನ್ನೆಲೆಯಲ್ಲಿ ವಾರದಲ್ಲಿ ಕೇವಲ 2 ದಿನ ಲಭ್ಯವಿರುತ್ತಾರೆ.

ಕಾಯಂ ಉಪತಹಸೀಲ್ದಾರ್ ಇಲ್ಲದೆ ಕಡತಗಳ ವಿಲೇವಾರಿ ವಿಳಂಬವಾಗುತ್ತಿದೆ. ರೈತರಿಗೆ ಅಗತ್ಯ ಸೇವೆಗಳು ಲಭ್ಯತೆ ದುಸ್ತರವಾಗಿದೆ. ರೈತರಿಗೆ ದೊರಕಬೇಕಾದ ಪರಿಹಾರ ಮೊತ್ತದಲ್ಲೂ ತಾರತಮ್ಯವಾಗುತ್ತಿದೆ ಎಂದು ದೂರಿದರು. ತಹಸೀಲ್ದಾರ್ ಚಂದ್ರಶೇಖರ್ ಗಾಳಿ ಮಾತನಾಡಿ, ನಾಡಕಚೇರಿಯಲ್ಲಿ ಕಾಯಂ ಸೇವೆ ಸಲ್ಲಿಸುವಂತೆ ಅಗತ್ಯಕ್ರಮ ವಹಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net