ಬಿಡಿಎಯಿಂದ 8 ಕೋಟಿ ಮೌಲ್ಯದ ಸ್ವತ್ತು ವಶ

Vijayavani-Featured-Image
Published on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅನಧಿಕೃತ ಒತ್ತುವರಿದಾರರನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಗುರುವಾರ ಬಿಟಿಎಂ 2ನೇ ಹಂತದ ಬಡಾವಣೆಯಲ್ಲಿ 8 ಕೋಟಿ ರೂ. ಬೆಲೆ ಬಾಳುವ ಜಾಗವನ್ನು ಮರುವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಬೆಂಗಳೂರು ದಕ್ಷಿಣ ತಾಲೂಕು ಬಿಳೇಕಹಳ್ಳಿ ಗ್ರಾಮದ ಸರ್ವೆ ನಂ. 56/1 ಹಾಗೂ 172/3ರ ಒಟ್ಟು 4,435 ಚದರ ಅಡಿ ವಿಸ್ತೀರ್ಣದ ಸ್ವತ್ತನ್ನು ಅನಧಿಕೃತದಾರರು ಶೆಡ್ಡ ನಿರ್ಮಿಸಿ ಸ್ವಂತ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದರು. ಈ ಬಗ್ಗೆ ಎಚ್ಚರಿಕೆ ನೀಡಿದ ನಂತರವೂ ಜಾಗ ತೆರವುಗೊಳಿಸದ ಕಾರಣ ಒತ್ತುವರಿದಾರರನ್ನು ಹೊರಹಾಕಿ ನಿವೇಶನವನ್ನು ಪ್ರಾಧಿಕಾರದ ವಶಕ್ಕೆ ಪಡೆಯಲಾಗಿದೆ.

ತೆರವು ಕಾರ್ಯಾಚರಣೆಯಲ್ಲಿ ಪ್ರಾಧಿಕಾರದ ಆರಕ್ಷಕ ಅಧೀಕ್ಷಕ, ಇನ್‌ಸ್ಪೆಕ್ಟರ್ ಹಾಗೂ ದಕ್ಷಿಣ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net