ಕಾಂಗ್ರೆಸ್ ಬಿ.ಎಲ್.ದೇವರಾಜು ವಾರ್ಷಿಕ ಆದಾಯ 2 ಲಕ್ಷ ರೂ

B.L.Devaraj
Published on

ಮಂಡ್ಯ: ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಅವರು ವಕೀಲ ವೃತ್ತಿಯಿಂದ ವಾರ್ಷಿಕ ಆದಾಯವಾಗಿ 2 ಲಕ್ಷ ರೂ ಸಂಪಾದಿಸುತ್ತಿದ್ದಾರೆ.

ಅವರ ಬಳಿ 1 ಲಕ್ಷ ರೂ ನಗದು, ಇನೋವಾ ಕಾರು ಇದೆ. ಒಟ್ಟು 43.17 ಲಕ್ಷ ರೂ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಪಿತ್ರಾರ್ಜಿತವಾಗಿ ಬಂದ 4 ಎಕರೆ 22 ಗುಂಟೆ ಕೃಷಿ ಜಮೀನು, ಮೈಸೂರಿನ ವಿಜಯನಗರದಲ್ಲಿ ತಲಾ 4000 ಚದರ ಅಡಿಯ ಎರಡು ನಿವೇಶನ, ಬಂಡಿಹೊಳೆ, ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ ಒಂದೊಂದು ಮನೆಗಳು ಸೇರಿದಂತೆ ಒಟ್ಟು 2.05 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಕೆ.ಆರ್.ಪೇಟೆಯ ಕರ್ನಾಟಕ ಬ್ಯಾಂಕ್, ಬಂಡಿಹೊಳೆ ಸೊಸೈಟಿಯಲ್ಲಿ ಒಟ್ಟು 14.10 ಲಕ್ಷ ರೂ ಸಾಲ ಮಾಡಿರುವುದಾಗಿ ನಮೂದಿಸಿದ್ದಾರೆ.

ಇವರ ಪತ್ನಿ ಬಿ.ಸರ್ವಮಂಗಳಾ ಅವರ ಬಳಿ 25 ಸಾವಿರ ರೂ ನಗದು, 500 ಗ್ರಾಂ ಚಿನ್ನ, 4 ಕಿಲೋ ಬೆಳ್ಳಿ ಸೇರಿದಂತೆ 30.55 ಲಕ್ಷ ರೂ ಮೌಲ್ಯದ ಚರಾಸ್ತಿ, ಹೇಮಾವತಿ ಬಡಾವಣೆಯಲ್ಲಿ ವಸತಿ ಸೇರಿದಂತೆ ಒಟ್ಟು 37 ಲಕ್ಷ ರೂ ಮೌಲ್ಯದ ಸ್ಥಿರಾಸ್ತಿ ಇದೆ. ಕರ್ನಾಟಕ ಬ್ಯಾಂಕ್ ಕೆ.ಆರ್.ಪೇಟೆ ಶಾಖೆಯಲ್ಲಿ ಚಿನ್ನಾಭರಣ ಗಿರವಿ ಇಟ್ಟು 1 ಲಕ್ಷ ರೂ ಸಾಲ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net