ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ASSET-DEED-DISTRUBUTION-KOPPAL-CMC-MLA
ASSET-DEED-DISTRUBUTION-KOPPAL-CMC-MLA
ಕೊಪ್ಪಳದಲ್ಲಿ ನಗರಸಭೆಯಿಂದ ಶುಕ್ರವಾರ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಿಸಲಾಯಿತು. ಶಾಸಕ ರಾಘವೇಂದ್ರ ಹಿಟ್ನಾಳ್, ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ, ಉಪಾಧ್ಯಕ್ಷೆ ಆಯೇಷಾ ರುಬಿನಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಯಲ್ಲಮ್ಮ ಗಿಣಿಗೇರಿ, ಸದಸ್ಯರಾದ ಮುತ್ತು ಕುಷ್ಟಗಿ, ಅಮ್ಜದ್ ಪಟೇಲ್, ಗುರುರಾಜ ಹಲಗೇರಿ, ಸಿದ್ದು ಮ್ಯಾಗೇರಿ, ಪರಶುರಾಮ ಮೇದಾರ, ಅಕ್ಬರ್ ಪಾಷಾ ಪಲ್ಟನ್ ಇದ್ದರು.
Published on

ಕೊಪ್ಪಳ: ನಗರದ ಸಿಂದೋಗಿ ರಸ್ತೆಯಲ್ಲಿನ ಎರಡು ಸಾವಿರ ಗುಂಪು ಮನೆ ಆಶ್ರಯ ಯೋಜನೆಯಡಿ ಇಂದು 36 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಶೀಘ್ರವೇ ಬಾಕಿ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಿ ಪ್ರದೇಶ ಅಭಿವೃದ್ಧಿ ಮಾಡಲಾಗುವುದೆಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.

ನಗರಸಭೆ ಕಚೇರಿಯಲ್ಲಿ ಶುಕ್ರವಾರ ಮೇದಾರ ಸಮುದಾಯದ 36 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದರು.

ವಸತಿ ಸಚಿವ ಬಿ.ಝಡ್.ಜಮೀರ್ ಖಾನ್ ಅವರನ್ನು ಶೀಘ್ರವೇ ಜಿಲ್ಲೆಗೆ ಕರೆಸುವೆ. ಗುಂಪು ಮನೆ ನಿರ್ಮಾಣ ಯೋಜನೆ ಬಗ್ಗೆ ವಿವರಿಸಲಾಗುವುದು. ಬೇಕಾದ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಿ ಮೂಲ ಸೌಕರ್ಯ ಕಲ್ಪಿಸಲಾಗುವುದು. 2009-10ರಲ್ಲಿ ಯೋಜನೆ ರೂಪಗೊಂಡಿದೆ. ಆದರೆ, ಸರಿಯಾಗಿ ಅನುಷ್ಠಾನವಾಗದ ಕಾರಣ ಹಿನ್ನಡೆಯಾಗಿದೆ. ಸದ್ಯ ನಿವೇಶನ ರಹಿತರಿಗೆ ಮೊದಲ ಹಂತದಲ್ಲಿ ಹಕ್ಕುಪತ್ರ ವಿತರಿಸಲಾಗುವುದು. ನನ್ನ ಅಧಿಕಾರವಧಿ ಮುಗಿಯುವುದರೊಳಗೆ ಗುಂಪು ಮನೆಗಳಿಗೆ ಮೂಲ ಸೌಲಭ್ಯ ಕಲ್ಪಿಸುವೆ ಎಂದು ಭರವಸೆ ನೀಡಿದರು.

ನಗರಸಭೆ ಅಧ್ಯಕ್ಷೆ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ ಮಾತನಾಡಿ, ಮೇದಾರ ಸಮುದಾಯದ 36 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಅವರ ಬಹು ದಿನದ ಬೇಡಿಕೆ ಈಡೇರಿದೆ. ಉಳಿದ ಅರ್ಹ ಫಲಾನುಭವಿಗಳಿಗೂ ಶೀಘ್ರ ಹಕ್ಕುಪತ್ರ ವಿತರಿಸಲಾಗುವುದು ಎಂದರು.

ನಗರಸಭೆ ಉಪಾಧ್ಯಕ್ಷೆ ಆಯೇಷಾ ರುಬಿನಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಯಲ್ಲಮ್ಮ ಗಿಣಿಗೇರಿ, ಸದಸ್ಯರಾದ ಮುತ್ತು ಕುಷ್ಟಗಿ, ಅಮ್ಜದ್ ಪಟೇಲ್, ಗುರುರಾಜ ಹಲಗೇರಿ, ಸಿದ್ದು ಮ್ಯಾಗೇರಿ, ಪರಶುರಾಮ ಮೇದಾರ, ಅಕ್ಬರ್ ಪಾಷಾ ಪಲ್ಟನ್, ಪೌರಾಯುಕ್ತ ಗಣಪತಿ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net