ವಿಧಾನಸಭಾ ಚುನಾವಣೆ ಬಹಿಷ್ಕಾರ

CTD 31 Bahishkara-02
Published on

ಚಿತ್ರದುರ್ಗ: ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿರುವ ಒಳಮೀಸಲಾತಿ ಹಿಂಪಡೆಯುವಂತೆ ಆಗ್ರಹಿಸಿ , ಹೊಳಲ್ಕೆರೆ ತಾಲೂಕಿನ ಐಯ್ಯನಹಳ್ಳಿ ತಾಂಡಾದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದು, ಈ ಅಭಿಯಾನ ಜಿಲ್ಲೆಯ ತಾಂಡಾಗಳಿಂದ ತಾಂಡಾಕ್ಕೆ ರವಾನೆಯಾಗಲಿದೆ. ಈ ಸಂಬಂಧ ಎಲ್ಲೆಡೆ ಪ್ರತಿಭಟನೆ ನಡೆಸಲು ತಹಸೀಲ್ದಾರ್ ಅವರಲ್ಲಿ ಅನುಮತಿ ಕೇಳಲಾಗಿದೆ ಎಂದರು.

ಗ್ರಾಮಕ್ಕೆ ರಾಜಕೀಯ ಪಕ್ಷಗಳ ಮುಖಂಡರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಯಾವುದೇ ಆಶ್ವಾಸನೆಗೂ ಕಿವಿಗೊಡುವುದಿಲ್ಲ ಎಂಬ ಬ್ಯಾನರ್ ಹಾಕಲು ಮುಂದಾಗುತ್ತಿದ್ದೇವೆ. ಇದಕ್ಕೆ ಶ್ರೀ ಸೇವಾಲಾಲ್ ಮಾಲಾಧಾರಿಗಳ ಯುವಕರ ಸಂಘ ಕೂಡ ಕೈಜೋಡಿಸಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net