ಸಹೋದ್ಯೋಗಿಯನ್ನು ಬೈಕ್‌ನಲ್ಲಿ ಕರೆದೊಯ್ದಿದ್ದಕ್ಕೆ ಹಲ್ಲೆ

MLA channabasappa visit mcggan hospital
ಸೀಗೆಹಟ್ಟಿಯಲ್ಲಿ ಹಲ್ಲೆಗೆ ಒಳಗಾದ ನಂದನ್ ಆರೋಗ್ಯವನ್ನು ಶಾಸಕ ಎಸ್.ಎನ್.ಚನ್ನಬಸಪ್ಪ ವಿಚಾರಿಸಿದರು.
Published on

ಶಿವಮೊಗ್ಗ: ಇಲಿಯಾಸ್ ನಗರದಲ್ಲಿ ಸಹೋದ್ಯೋಗಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಕ್ಕೆ ಅನ್ಯಕೋಮಿನ ಯುವಕರು ಹಿಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಸೀಗೆಹಟ್ಟಿಯ ನಂದನ್ ಹಲ್ಲೆಗೆ ಒಳಗಾದ ಯುವಕ. ಈತ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿದ್ದ ಮುಸ್ಲಿಂ ಯುವತಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿ ಮನೆಗೆ ಬಿಟ್ಟಿದ್ದ ಎನ್ನಲಾಗಿದೆ. ಅದೇ ಕಾರಣಕ್ಕೆ ಭಾನುವಾರ ರಾತ್ರಿ ಸೀಗೆಹಟ್ಟಿಯ ನಂದನ್ ಮನೆಗೆ ಬಂದಿದ್ದ ಇಲಿಯಾಸ್ ನಗರದ ಯುವಕರ ಗುಂಪು, ಮನಸ್ಸೋ ಇಚ್ಛೆ ಹಲ್ಲೆ ನಡೆಸಿದೆ. ಗಂಭೀರವಾಗಿ ಗಾಯಗೊಂಡ ನಂದನ್ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕ ಚನ್ನಬಸಪ್ಪ ಭೇಟಿ, ಫೇಸ್‌ಬುಕ್‌ನಲ್ಲಿ ಪೋಸ್ಟ್: ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿರುವ ನಂದನ್ ಆರೋಗ್ಯ ವಿಚಾರಿಸಿದ ಶಾಸಕ ಎಸ್.ಎನ್.ಚನ್ನಬಸಪ್ಪ, ಯುವಕನಿಗೆ ಹಾಗೂ ಅವನ ಪಾಲಕರಿಗೆ ಧೈರ್ಯ ತುಂಬಿದರು.
ಅನ್ಯಕೋಮಿನ ಯುವಕರಿಂದ ಹಲ್ಲೆಗೊಳಗಾದ ನಂದನ್ ಬಗ್ಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಧ್ವನಿ ಎತ್ತಿದ್ದು, ಈ ಬಗ್ಗೆ ತಮ್ಮದೇ ಫೇಸ್‌ಬುಕ್ ಖಾತೆಯಲ್ಲಿ ಇನ್ನಾದರೂ ಇತ್ತ ಗಮನಹರಿಸುವಿರಾ ಮಾನ್ಯ ಗೃಹ ಸಚಿವರೇ! ಎಂಬ ಬರಹವೊಂದನ್ನು ಪೋಸ್ಟ್ ಮಾಡಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮುಸ್ಲಿಂ ಪುಂಡರು ಬಾಲ ಬಿಚ್ಚುವುದು ಮುಂದುವರಿದಿದೆ. ಕಾಂಗ್ರೆಸ್ ಮತ್ತು ಮುಸ್ಲಿಮರ ನಡುವಿನ ಸೌಹಾರ್ದಕ್ಕೆ ಶಿವಮೊಗ್ಗದ ಮತ್ತೊಬ್ಬ ಹಿಂದು ಯುವಕ ಹಲ್ಲೆಗೊಳಗಾಗಿರುವುದು ಅತ್ಯಂತ ಖಂಡನೀಯ. ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪುಂಡರಿಂದ ಮಿತಿ ಮೀರಿದ ಹಾವಳಿ ನಡೆಯುತ್ತಿದೆ. ಇನ್ನಾದರೂ ಶಿವಮೊಗ್ಗದ ಕಡೆ ಸ್ವಲ್ಪ ಗಮನ ಹರಿಸಿ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರಿಗೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net