ಗೂರ್ಖಾ ಮೇಲೆ ದುಷ್ಕರ್ವಿುಗಳಿಂದ ಹಲ್ಲೆ

17-NRD-1 NARASHING GOORKHA
Published on

ನರಗುಂದ: ಕಳ್ಳತನ ತಡೆಯಲು ಹೋದ ಗೂರ್ಖಾನ ಮೇಲೆ ನಾಲ್ಕೈದು ಜನರ ತಂಡ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಪಟ್ಟಣದಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ.

ಮೂಲತಃ ನೇಪಾಳದ ಗೋಟಿ ಜಿಲ್ಲೆಯ ನಿವಾಸಿ ನರಸಿಂಗ್ ಹರೀಶಸಿಂಗ್ ಸೌಧ (60) ಮೇಲೆ ದುಷ್ಕರ್ವಿುಗಳು ಕಟ್ಟಿಗೆ, ರಾಡ್ ಹಾಗೂ ವಿವಿಧ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನರಸಿಂಗ್ ಕಳೆದ 40 ವರ್ಷಗಳಿಂದ ಪಟ್ಟಣದಲ್ಲಿ ವಾಸವಾಗಿದ್ದು, ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದಾನೆ. ಭಾನುವಾರ ಬೆಳಗಿನಜಾವ ಗಸ್ತು ತಿರುಗುತ್ತಿದ್ದಾಗ ಪಟ್ಟಣದ ಗಾಂಧಿ ಸರ್ಕಲ್​ನಲ್ಲಿರುವ ವಿರೂಪಾಕ್ಷಯ್ಯ ಹಿರೇಮಠ ಎಂಬುವರ ಅಡಕೆ ಅಂಗಡಿಯ ಬೀಗ ಮುರಿದಿರುವ ಕಳ್ಳರು 1,500 ನಗದು, 25 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.

ತದನಂತರ ಶಂಕ್ರಣ್ಣ ವಾಳದ ಎಂಬುವರ ದಲಾಲಿ ಅಂಗಡಿಯ ಬೀಗ ಮುರಿದು ಕಳ್ಳತನಕ್ಕೆ ಮುಂದಾಗಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಗೂರ್ಖಾ ಕಳ್ಳತನ ತಡೆಯಲು ಮುಂದಾದಾಗ ಆತನ ಮೇಲೆ ಹಲ್ಲೆ ನಡೆಸಿದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗೂರ್ಖಾನನ್ನು ಸ್ಥಳೀಯರು ಬೆಳಗ್ಗೆ 6 ಗಂಟೆಗೆ ಪಟ್ಟಣದ ಸರ್ಕಾರಿ ತಾಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ. ತಲೆ ಹಾಗೂ ಕಣ್ಣಿಗೆ ಗಂಭೀರವಾದ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್್ಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಪಿಐ ಡಿ.ಬಿ. ಪಾಟೀಲ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net