

ಬೈಲಕುಪ್ಪೆ: ಸಮೀಪದ ಹಂದಿಗುಡ್ಡ ಕಾವಲ್ ಗ್ರಾಮದ ಒಂದೇ ವರ್ಗದ ಎರಡು ಕುಟುಂಬದ ಜಗಳ ಭಾನುವಾರ ತಾರಕಕ್ಕೇರಿ ಜವರಯ್ಯನ ಪುತ್ರ ಮಣಿಕಂಠ ಗಂಗಾಮಣಿ ಪುತ್ರ ರಾಜೇಶ್ ಎಂಬುವರಿಗೆ ಚಾಕುವಿನಿಂದ ಚುಚ್ಚಿ ಹಲ್ಲೆ ನಡೆಸಿದ್ದಾನೆ.
ಜಗಳದಲ್ಲಿ ಮಣಿಕಂಠನ ತಲೆಗೆ ಪೆಟ್ಟಾಗಿದ್ದು, ಮಡಿಕೇರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರಾಜೇಶ್, ಸುರೇಶ್, ಪುಟ್ಟಿರಮ್ಮ ಮತ್ತು ರವಿ ಎಂಬುವರು ಕುಶಾಲನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಣಿಕಂಠ ಹಾಗೂ ರಾಜೇಶ್ ಗುಂಪುಗಳ ವಿರುದ್ಧ ಬೈಲಕುಪ್ಪೆ ಠಾಣಾಧಿಕಾರಿ ಅಜಯ್ಕುಮಾರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪೊಲೀಸ್ ಸಿಬ್ಬಂದಿ ಅನಿತಾ, ಮುದ್ದುರಾಜ್ ಇದ್ದರು.