250 ರೂಪಾಯಿಗಾಗಿ ಬಾಟಲಿಯಿಂದ ಹಲ್ಲೆ

6 Dwd 4A (Rayasab)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕೇವಲ 250 ರೂಪಾಯಿ ಸಲುವಾಗಿ ಯುವಕನೊಬ್ಬ ತನ್ನ ಗೆಳೆಯನಿಗೆ ಬಾಟಲಿಯಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಾಯಸಾಬ ನದಾಫ್ ಗಾಯಾಳು. ಈತ ತನ್ನ ಗೆಳೆಯ ಪ್ರವೀಣ ಎಂಬಾತನ ಬಳಿ 250 ರೂಪಾಯಿ ಸಾಲ ಪಡೆದಿದ್ದ. ಹಣ ವಾಪಸ್ ಕೊಡುವಂತೆ ರಾಯಸಾಬನಿಗೆ ಪ್ರವೀಣ ಕೇಳಿದ್ದಾನೆ. ಹಣ ಇಲ್ಲ ಎಂದು ಹೇಳಿದ್ದರಿಂದ ಕೆರಳಿದ ಪ್ರವೀಣ, ರಾಯಸಾಬನಿಗೆ ಕೋಲ್ಡ್ರಿ0ಕ್ ಬಾಟಲಿ ಒಡೆದು ಹೊಟ್ಟೆಗೆ ಎರಡು ಬಾರಿ ಚುಚ್ಚಿದ್ದಾನೆ. ಗಂಭೀರ ಗಾಯಗೊಂಡ ರಾಯಸಾಬನನ್ನು ಹುಬ್ಬಳ್ಳಿಯ ಕೆಎಂಸಿಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಪ್ರವೀಣನನ್ನು ಪೊಲೀಸರು ಬಂಽಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net