ಬೈಂದೂರಿನಲ್ಲಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ, ತಡವಾಗಿ ಬೆಳಕಿಗೆ ಬಂದ ಪ್ರಕರಣ

Crime
Published on

ಕುಂದಾಪುರ: ಬೈಂದೂರು ತಾಲೂಕು ನಂದನವನ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಗಾಯಾಳು ಪ್ರಸನ್ನ ಎಂಬುವರು ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ನೇಹಿತ ಮನೋಜ್ ಖಾರ್ವಿ ಜತೆ ಊಟಕ್ಕೆ ತೆರಳಿದ್ದಾಗ ಬುಧವಾರ ರಾತ್ರಿ ನಡೆದಿದೆ.

ಪ್ರಸನ್ನ ಮತ್ತು ಮನೋಜ್ ಹೋಟೆಲ್ ಬಳಿ ತೆರಳಿದ್ದಾಗ ಅಲ್ಲಿ ನಿಂತಿದ್ದ ಸುದರ್ಶನ ಹಾಗೂ ಯತೀಶ್ ನಡುವೆ ವಾಗ್ವಾದ ಶುರು ಮಾಡಿದ್ದಾರೆ. ಸುದರ್ಶನ ಚೂರಿಯಿಂದ ಪ್ರಸನ್ನ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net