ಮಹಿಳೆಗೆ ಹಲ್ಲೆ, ವಿಡಿಯೋ ವೈರಲ್

Assault
Published on

ಬೆಳ್ತಂಗಡಿ: ಮಹಿಳೆಯೊಬ್ಬರಿಗೆ ಯುವಕ ಅಂಗಡಿಗೆ ನುಗ್ಗಿ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ಉಜಿರೆ ಪೇಟೆಯಲ್ಲಿ ಬಟ್ಟೆ ವ್ಯಾಪಾರ ಹೊಂದಿರುವ ಮಹಿಳೆಯೊಬ್ಬರ ಅಂಗಡಿಗೆ ನುಗ್ಗಿದ ಯುವಕ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿರುವುದು ಕಂಡು ಬರುತ್ತಿದೆ. ಹಲ್ಲೆ ನಡೆಸಿದ ಯುವಕ ಕನ್ಯಾಡಿಯವನೆಂದು ಹೇಳಲಾಗುತ್ತಿದ್ದು, ಮಹಿಳೆಯೊಂದಿಗೆ ಹಣಕಾಸು ವ್ಯವಹಾರ ಹೊಂದಿದ್ದು ಈ ವಿಚಾರದಲ್ಲಿ ಗಲಾಟೆ ನಡೆದು ಥಳಿಸಿದ್ದಾನೆ ಎನ್ನಲಾಗಿದೆ. ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಎರಡು ದಿನಗಳ ಹಿಂದೆ ನಡೆದಿದ್ದು ಹಲ್ಲೆಯಿಂದ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net