ಸಾಲ ವಸೂಲಿಗೆ ತೆಳಿದ್ದವನ ಮೇಲೆ ಹಲ್ಲೆ

Crime Logo
Published on

ರಾಮನಗರ: ಸಾಲು ವಸೂಲಿಗೆ ತೆರಳಿದ್ದ ಖಾಸಗಿ ಫೈನಾನ್ಸ್ ಸಿಬ್ಬಂದಿ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡ ಮಣ್ಣುಗುಡ್ಡೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಖಾಸಗಿ ಫೈನಾನ್ಸ್ ಸಿಬ್ಬಂದಿ ಮಿಥುನ್ ಕುಮಾರ್ (23) ಹಲ್ಲೆಗೊಳಗಾದವರು, ರಾಮನಗರ ತಾಲೂಕಿನ ದೊಡ್ಡಮಣ್ಣುಗುಡ್ಡೆ ಗ್ರಾಮ ರಾಜೇಶ್ ಎಂಬುವರು, ಖಾಸಗಿ ಕಂಪನಿಯಿಂದ ಸಾಲ ಪಡೆದಿದ್ದು, ಕಳೆದ 6 ತಿಂಗಳಿಂದ ಇಎಂಐ ಪಾವತಿ ಮಾಡಿರಲಿಲ್ಲ, ಈ ಹಿನ್ನೆಲೆಯಲ್ಲಿ ಮಿಥುನ್ ಕುಮಾರ್ ಮಂಗಳವಾರ ಸಂಜೆ ಸಾಲ ವಸೂಲಾತಿಗೆ ತೆರಳಿದ್ದು, ಈ ವೇಳೆ ರಾಜೇಶ್ ದೊಣ್ಣೆಯಿಂದ ತಲೆಗೆ ಹೊಡೆದಿದ್ದಾನೆ.

ಇದರಿಂದ ಮಿಥುನ್ ಕುಮಾರ್ ಅವರ ತಲೆಗೆ ತೀವ್ರ ಗಾಯವಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆರೋಪಿ ರಾಜೇಶ್‌ನನ್ನು ಪೊಲೀಸರು ಬಂಧಿಸಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net