ಶ್ವಾನಪ್ರೇಮಿ ರಜನಿ ಶೆಟ್ಟಿ ಮೇಲೆ ನೆರೆಮನೆ ನಿವಾಸಿಯಿಂದ ಹಲ್ಲೆ

Assault
Published on

ಮಂಗಳೂರು: ಬೀದಿ ನಾಯಿಗಳ ಆಶ್ರಯದಾತೆಯಾಗಿರುವ ರಜನಿ ಶೆಟ್ಟಿ ಎಂಬುವವರ ಮೇಲೆ ನೆರೆಮನೆಯವರು ಕಲ್ಲಿನಿಂಡ ಹೊಡೆದು ಹಲ್ಲೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಗಾಯಗೊಂಡಿರುವ ರಜನಿ ಶೆಟ್ಟಿ ಅವರನ್ನು ವೆನ್ಲಾಕ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೆರೆಮನೆಯಲ್ಲಿ ವಾಸಿಸುವ ಮಂಜುಳಾ ಶೆಟ್ಟಿ ಎಂಬುವವರು ರಜನಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.

Rajani Shetty

ಪ್ರತಿನಿತ್ಯ ಅಸಂಖ್ಯಾತ ಬೀದಿ ನಾಯಿಗಳಿಗೆ ರಜನಿ ಶೆಟ್ಟಿಯವರು ಆಹಾರ ನೀಡುತ್ತಿದ್ದರು. ಈ ವಿಚಾರವಾಗಿ ಮಂಜುಳಾ ಶೆಟ್ಟಿ ರಜನಿ ಅವರೊಂದಿಗೆ ಗಲಾಟೆ ಮಾಡುತ್ತಿದ್ದರು. ಸೋಮವಾರ ಬೆಳಗ್ಗೆ ಸಹ ಇದೇ ವಿಚಾರಕ್ಕೆ ಗಲಾಟೆ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮಂಜುಳಾ ರಜನಿ ಅವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ.

ಹಲ್ಲೆ ಸಂಬಂಧ ಮಂಜುಳಾ ವಿರುದ್ಧ ಬರ್ಕೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಗಾಯಾಳು ರಜನಿ ಅವರನ್ನು ಚಿಕಿತ್ಸೆಗಾಗಿ ವೆನ್ಲಾಕ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net