ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಬ್ಲೇಡ್‌ನಿಂದ ಹಲ್ಲೆ

11 Dwd 1 (Basavaraj Kamatar)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕ್ಷÄಲ್ಲಕ ಕಾರಣಕ್ಕೆ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಮೂವರು ಬ್ಲೇಡ್‌ನಿಂದ ಹಲ್ಲೆ ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ಡಿಎಆರ್ ಕಾನ್‌ಸ್ಟೇಬಲ್ ಬಸವರಾಜ ಕಮತರ ಗಾಯಗೊಂಡವರು. ನಗರದ ಕಿತ್ತೂರ ಚೆನ್ನಮ್ಮ ಉದ್ಯಾನ ಹತ್ತಿರದ ಐಸ್ ಗೇಟ್ ಬಳಿ ಬಸವರಾಜ ಮಫ್ತಿಯಲ್ಲಿ ನಿಂತಿದ್ದರು. ಈ ವೇಳೆ ಬಂದ ಇಕ್ಬಾಲ್ ತಮಟಗಾರ, ಅಮೀರ್ ಹಾಗೂ ಅಜಮರ್ ಎಂಬುವರು ಕಾರ್ ಪಾರ್ಕಿಂಗ್ ವಿಚಾರವಾಗಿ ಬಸವರಾಜ ಜೊತೆ ಜಗಳ ತೆಗೆದಿದ್ದಾರೆ. ತಾನು ಪೊಲೀಸ್ ಎಂದರೂ ಕೇಳದ ಮೂವರು ಬ್ಲೇಡ್‌ನಿಂದ ಮುಖದ ಮೇಲೆ ಹಲ್ಲೆ ಮಾಡಿದ್ದಾರೆ. ಬಸವರಾಜ ಕಣ್ಣಿನ ಮೇಲ್ಭಾಗ ಮತ್ತು ಹಣೆಗೆ ತೀವ್ರ ಗಾಯವಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಽಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net