ಪೊಲೀಸರ ಮೇಲೆ ಹಲ್ಲೆ-ಬಂಧನ

Arrest
Published on

ಪಣಜಿ: ಗೋವಾದ ಮಡಗಾಂವನಲ್ಲಿ ಕೊಂಕಣ ರೈಲ್ವೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ಭಟ್ಕಳ ಮೂಲದ ವ್ಯಕ್ತಿಯನ್ನು ಬುಧವಾರ ಬಂಧಿಸಲಾಗಿದೆ.

ಡೋಪಿಯಲ್ಲಿ ವಾಸವಾಗಿರುವ ರಮೇಶ್ ಲಕ್ಷ್ಮಣ್ ನಾಯ್ಕ (39) ಬಂಧಿತ ಆರೋಪಿ.

ಮಡಗಾಂವ್ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸ್ ಶ್ರೀನಿವಾಸ್ ರೆಡ್ಡಿ ಅವರು ಸಾಮಾನ್ಯ ಉಡುಪಿನಲ್ಲಿ ಗಸ್ತು ತಿರುಗುತ್ತಿದ್ದರು. ನಾಯಕ್ ರೆಡ್ಡಿ ಜತೆ ವಾಗ್ವಾದಕ್ಕಿಳಿದು ಬಳಿಕ ಥಳಿಸಿದ್ದಾನೆ. ರೆಡ್ಡಿ ಅವರ ಕೈ ಬೆರಳಿಗೆ ಗಾಯವಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net