ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ

riswan
ಆರೋಪಿ ಮಹಮ್ಮದ್ ಜೌಹರ್ ರಿಸ್ವಾನ್
Published on

ಕಾಸರಗೋಡು: ನಗರದ ಬ್ಯಾಂಕ್ ರಸ್ತೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೊಂದರ ಎಂ.ಆರ್.ಐ. ಟೆಕ್ನಿಕಲ್ ಸ್ಕಾೃನಿಂಗ್ ಟೆಕ್ನಿಕಲ್ ಸಿಬ್ಬಂದಿ ಉಳಿಯತ್ತಡ್ಕ ಎಸ್.ಪಿ. ನಗರ ನಿವಾಸಿ ಅಬ್ದುಲ್ ರಜಾಕ್ ಎಂಬುವರನ್ನು ಆಸ್ಪತ್ರೆ ವಠಾರದಲ್ಲಿ ಇರಿದು ಗಾಯಗೊಳಿಸಿದ್ದ ಆರೋಪಿ ಉದುಮ ತೆಕ್ಕೇಕರ ನಿವಾಸಿ ಮಹಮ್ಮದ್ ಜೌಹರ್ ರಿಸ್ವಾನ್ ಎಂಬಾತನನ್ನು ಬೆಂಗಳೂರಿನ ವಿಮಾನ ನಿಲ್ದಾಣದಿಂದ ಪೊಲೀಸರು ಬಂಧಿಸಿದ್ದಾರೆ.

ಗಂಭೀರ ಹಲ್ಲೆ ನಡೆಸಿದ ನಂತರ ಆರೋಪಿ ವಿದೇಶಕ್ಕೆ ಪರಾರಿಯಾಗುವ ನಿಟ್ಟಿನಲ್ಲಿ ವಿಮಾನ ನಿಲ್ದಾಣ ತಲುಪಿದ್ದು, ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಯನ್ನು ಕಾಸರಗೋಡಿಗೆ ಕರೆತರಲಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net