

ಬೈಲಹೊಂಗಲ: ಪಟ್ಟಣದಲ್ಲಿ ಬಸ್ ಚಾಲಕನ ಮೇಲೆ ಕಾರು ಮಾಲೀಕ ಹಲ್ಲೆ ನಡೆಸಿದ ಘಟನೆ ಶನಿವಾರ ನಡೆದಿದೆ. ಪಟ್ಟಣದ ಕೇಂದ್ರ ಬಸ್ ನಿಲ್ದಾಣದಿಂದ ಯರಗಟ್ಟಿಗೆ ತೆರಳುತ್ತಿದ್ದ ಬಸ್ ಸಂಗೊಳ್ಳಿ ರಾಯಣ್ಣ ವತ್ತದ ಹತ್ತಿರ ಕಾರಿಗೆ ತಾಗಿದೆ. ಇದರಿಂದ ಬಸ್ ಚಾಲಕ, ಕಾರ್ ಮಾಲೀಕ ಪರಸ್ಪರ ವಾಗ್ವಾದ ನಡೆಸಿದರು. ಕಾರು ಮಾಲೀಕನು ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದ ಚಾಲಕ ಬಸ್ ನಿಂತಲ್ಲಿಯೇ ನಿಲ್ಲಿಸಿ ಪೊಲೀಸ್ ಠಾಣೆಗೆ ಧಾವಿಸಿದರು. ಇದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು, ಪಾದಚಾರಿಗಳು ಪರದಾಡುಂತಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾಹನ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.