ಓವರ್​ಟೇಕ್​ ಮಾಡಿದ್ದಕ್ಕೆ KSRTC ಚಾಲಕ-ನಿರ್ವಾಹಕನನ್ನು ಮನಸೋಇಚ್ಛೆ ಥಳಿಸಿದ ಯುವಕ

Assault
Published on

ಮೈಸೂರು: ಓವರ್​ ಟೇಕ್​ ಮಾಡಿದರು ಎಂಬ ಕಾರಣಕ್ಕೆ ಯುವಕನೋರ್ವ KSRTC ಬಸ್​​ ಚಾಲಕ ಹಾಗೂ ನಿರ್ವಾಹಕನನ್ನು ಹಿಡಿದು ಮನಸೋಇಚ್ಛೆ ಥಳಿಸಿರುವ ಘಟನೆ ಮೈಸೂರು ನಗರದಲ್ಲಿ ನಡೆದಿದೆ.

ಮೈಸೂರು ನಗರದ ಫೈವ್​ ಲೈಟ್​​ ವೃತ್ತದಲ್ಲಿ ಘಟನೆ ನಡೆದಿದ್ದು, ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಲಷ್ಕರ್ ಪೊಲೀಸ್​ ಠಾಣೆ ಸಿಬ್ಬಂದಿ ಹಲ್ಲೆಗೊಳಗಾದ ಚಾಲಕ ಹಾಗೂ ನಿರ್ವಾಹಕನನ್ನು ರಕ್ಷಿಸಿದ್ದಾರೆ.

ಘಟನೆಯ ಹಿನ್ನಲೆ

ಕನಕಪುರ-ಮೈಸೂರು ಮಾರ್ಗದ ಬಸ್​ ಮಳವಳ್ಳಿ ಮೂಲಕ ನಗರವನ್ನು ಪ್ರವೇಶಿಸಿದೆ. ಮಾರ್ಗಮಧ್ಯೆ ತನ್ನ ಸ್ಕೂಟರ್​ಅನ್ನು ಓವರ್​ಟೇಕ್​ ಮಾಡಿದರು ಎಂಬ ಕಾರಣಕ್ಕೆ ಯುವಕನೋರ್ವ ಬಸ್​ ಅಡ್ಡಗಟ್ಟಿ ಚಾಲಕನೊಂದಿಗೆ ಜಗಳ ತೆಗೆದಿದ್ದಾನೆ. ಬಳಿಕ ಚಾಲಕನನ್ನು ಏಕಾಏಕಿ ಬಸ್​ನಿಂದ ಹೊರಗೆಳೆದು ಹಲ್ಲೆ ನಡೆಸಿದ್ದಾನೆ. ಚಾಲಕನ ನೆರವಿಗೆ ಬಂದ ನಿರ್ವಾಹಕನ ಮೇಲೂ ಯುವಕ ಹಲ್ಲೆ ನಡೆಸಿ ಪುಂಡಾಟ ಮೆರೆದಿದ್ದಾನೆ.

ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಲಷ್ಕರ್​ ಪೊಲೀಸ್​ ಠಾಣೆ ಸಿಬ್ಬಂದಿ ಹಲ್ಲೆಗೊಳಗಾದವರನ್ನೂ ರಕ್ಷಿಸಿ ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net