ಯಲ್ಲಾಪುರ: ನಾಲ್ಕು ಜನರ ಗುಂಪೊಂದು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಘಟನೆ ತಾಲೂಕಿನ ಕುಂದರಗಿ ಸಮೀಪದ ಬೆಳ್ಳಂಬೆಯಲ್ಲಿ ನಡೆದಿದೆ.
ನರಸಿಂಹ ಹುಲಿಯ ಮರಾಠಿ ಗಾಯಗೊಂಡ ವ್ಯಕ್ತಿ. ಅಕ್ರಮ ಸಂಬಂಧದ ಕುರಿತಾದ ಶಂಕೆಯಿಂದ ಈತನ ಮೇಲೆ ಸುರೇಶ ಪುರುಷು ಮರಾಠಿ, ಸುಮಿತ್ರಾ ಸುರೇಶ ಮರಾಠಿ, ಕವೀಂದ್ರ ಪುರುಷು ಮರಾಠಿ, ಯೋಗೇಶ ಪುರುಷು ಮರಾಠಿ ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ. ಗಾಯಗೊಂಡ ನರಸಿಂಹ ಅವರಿಗೆ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆ ಕುರಿತು ಗಾಯಾಳುವಿನ ಪತ್ನಿ ಶಶಿಕಲಾ ನರಸಿಂಹ ಮರಾಠಿ ದೂರು ನೀಡಿದ್ದು, ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.