ಪ್ರೀತಿ ಹೆಸರಲ್ಲಿ ಅಸ್ಸಾಂ ಮಹಿಳೆಗೆ ವಂಚನೆ

soniy
Published on

ಬಂಗಾರಪೇಟೆ: ಮೂರು ವರ್ಷಗಳ ಹಿಂದೆ ಆನ್​ಲೈನ್​ ಗೇಮ್​ನಿಂದ ಪರಿಚಯವಾದ ಅಸ್ಸಾಂ ಮೂಲದ ವಿವಾಹಿತ ಮಹಿಳೆ ಮತ್ತು ಬಂಗಾರಪೇಟೆಯ ಯುವಕನ ನಡುವಿನ ಪ್ರೇಮ ಪ್ರಕರಣವೀಗ ಠಾಣೆ ಮೆಟ್ಟಿಲೇರಿದೆ. ಪತಿ ಮತ್ತು ಪುತ್ರನನ್ನು ಬಿಟ್ಟು ಬಂಗಾರಪೇಟೆಗೆ ಬಂದ ಮಹಿಳೆ ಯುವಕನೊಂದಿಗೆ ಸಹಜೀವನ ನಡೆಸಿದ್ದರು. ಈ ವೇಳೆ 12 ಲಕ್ಷ ರೂ. ಪಡೆದು, ಮದುವೆ ಆಗದೆ, ಖಾಸಗಿ ಕ್ಷಣಗಳ ವಿಡಿಯೋ ಇಟ್ಟುಕೊಂಡು ಬೆದರಿಕೆ ಹಾಕುತ್ತಿರುವುದಾಗಿ ಪ್ರೇಮಿಯ ವಿರುದ್ಧ ಪ್ರೇಯಸಿ ಬುಧವಾರ ದೂರು ದಾಖಲಿಸಿದ್ದಾಳೆ.

ಅಸ್ಸಾಂನ ಸೋನಿಯಾಶರ್ಮ (32) ವಂಚನೆಗೊಳಗಾದ ಮಹಿಳೆ, ಆರೋಪಿ ಜಮೀರ್​ ಪಾಷಾ (26), ಇವನ ತಾಯಿ ಸಹಜಾನ್​ ಬೇಗಂ (55)ನನ್ನು ಬಂಧಿಸಲಾಗಿದೆ.

ಏನಿದು ಟನೆ:ಅಸ್ಸಾಂ ಮೂಲದ ಸೋನಿಯಾ ಶರ್ಮಾ ಶಿಕ್ಷಕಿಯಾಗಿದ್ದು, 2022ರಲ್ಲಿ ಆನ್​ಲೈನ್​ ಗೇಮ್​ ಆಡುವಾಗ ಬಂಗಾರಪೇಟೆಯ ಜಮೀರ್​ ಪಾಷಾ ಪರಿಚಯವಾಗಿದ್ದಾನೆ. ಮೊಬೈಲ್​ ಅಂಗಡಿ ಇಟ್ಟುಕೊಂಡು ತಾಯಿಯೊಂದಿಗೆ ಜೀವನ ನಡೆಸುತ್ತಿದ್ದ. ಯುವಕನ ಜತೆಗೆ ಚಾಟಿಂಗ್​ ನಡೆದು, ೋನ್​ ನಂಬರ್​ ಬದಲಾಯಿಸಿಕೊಂಡು, ಇಬ್ಬರು 3 ವರ್ಷಗಳಿಂದ ಇಷ್ಟಪಡುತ್ತಿದ್ದರು. ಇದೇ ಸಲುಗೆಯಿಂದ ಇಬ್ಬರೂ ಭೇಟಿ ಮಾಡುವುದನ್ನು ಆರಂಭಿಸಿದ್ದು, ಜುಲೈನಲ್ಲೇ ಬಂದ ಆಕೆ ಬಂಗಾರಪೇಟೆಯಲ್ಲಿ ಯುವಕನೊಂದಿಗೆ ಸಹಜೀವನ ನಡೆಸಿದ್ದರು. ಪ್ರಿಯಕರನಿಗೆ ಸುಮಾರು 12 ಲ ರೂ. ಸೋನಿಯಾ ನೀಡಿದ್ದು, ಮದುವೆಯಾಗುವುದಾಗಿ ಜಮೀರ್​ ಪಾಷಾ ಮಾತು ಕೊಟ್ಟಿದ್ದ. ಇದರ ಮಧ್ಯೆ ಇಬ್ಬರ ನಡುವಿನ ಖಾಸಗಿ ವಿಡಿಯೋಗಳನ್ನು ಜಮೀರ್​ ಪಾಷ ಮೊಬೈಲ್​ನಲ್ಲಿ ಸೆರೆ ಹಿಡಿದುಕೊಂಡಿದ್ದಾನೆ ಎನ್ನಲಾಗಿದೆ.

ಮಹಿಳೆಗೆ ಮದುವೆಯಾಗುತ್ತೇನೆಂದು ಹೇಳುತ್ತಲೇ ಅತ್ತ ಬೇರೊಬ್ಬಳ ಜತೆಗೂ ಮಾತಾಡ್ತಾ ಇದ್ದುದ್ದನ್ನು ಗಮನಿಸಿದ ಸೋನಿಯಾ ಶರ್ಮಾ, ನಿನ್ನ ಸಹವಾಸ ಬೇಡ ನನ್ನ 12 ಲ ರೂ. ಕೊಡು ಎಂದಾಗ ಇಬ್ಬರ ಮಧ್ಯೆ ಜಗಳ ಶುರುವಾಗಿ, ಹೊಡೆದಾಡಿದ್ದಾರೆ. ಕೊನೆಗೆ ದುಡ್ಡು ಸಹ ಬೇಡವೆಂದು ಜಮೀರ್​ ಪಾಷಾನನ್ನ ಬಿಟ್ಟು ಸೋನಿಯಾ ಶರ್ಮಾ ಬೆಂಗಳೂರಿಗೆ ಹೋಗಿದ್ದಾಳೆ. ಆದರೆ, ಮತ್ತೆ ಮನವೊಲಿಸಿ ಮನೆಗೆ ಕರೆತಂದ ಜಮೀರ್​ ಪಾಷಾ, ಮಹಿಳೆ ಮೇಲೆ ಹಲ್ಲೆ ನಡೆಸಿ ಕೂಡಿ ಹಾಕಿದ್ದಾನೆ.

ಇದರಿಂದ ರೋಸಿಹೋದ ಸೋನಿಯಾ ಶರ್ಮಾ ಬುಧವಾರ ಪ್ರಿಯಕರನ ಬಂಧನದಿಂದ ತಪ್ಪಿಸಿಕೊಂಡು ನೇರ ಬಂಗಾರಪೇಟೆ ಪೊಲೀಸ್​ ಠಾಣೆಗೆ ಬಂದು ಜಮೀರ್​ ಪಾಷಾ ಮತ್ತು ಅವನ ತಾಯಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ. ಜಮೀರ್​ಪಾಷಾ ವಿರುದ್ಧ ಅತ್ಯಾಚಾರ, ಅಕ್ರಮಕೂಟ, ಪ್ರಾಣಬೆದರಿಕೆ ಹಾಗೂ ವಂಚನೆ ಪ್ರಕರಣ ದಾಖಲಿಸಲಾಗಿದೆ. ಮಗನಿಗೆ ಸಹಕರಿಸಿದ ತಾಯಿ ವಿರುದ್ಧವೂ ದೂರು ದಾಖಲಿಸಿ ತಾಯಿ, ಮಗನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಇನ್ನು ಸೋನಿಯಾ ಶರ್ಮಾಗೆ ಈಗಾಗಲೇ ಮದುವೆಯಾಗಿದ್ದು, ಗಂಡನಿಂದ ದೂರವಿದ್ದು, 11 ವರ್ಷದ ಮಗಳಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net