ಆದರ್ಶ ಶಿಕ್ಷಣ ಸಂಸ್ಥೆಗೆ ಸಂಸ್ಥಾಪಕ ಸೇವೆ ಅವಿಸ್ಮರಣೀಯ- ಪಿ ಆರ್ ಅಡವಿ

IMG_20230829_150804
Published on

ಆದರ್ಶ ಶಿಕ್ಷಣ ಸಮಿತಿ ಆವರಣದಲ್ಲಿ ಸಮಿತಿಯ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಉಪಾಧ್ಯಕ್ಷರಾದ ಪಿ ಆರ್ ಅಡವಿ ಅವರು ಮಾತನಾಡಿ 33 ಸಂಸ್ಥಾಪಕ ಸದಸ್ಯರು ಹುಟ್ಟು ಹಾಕಿದರು. ಇವರಲ್ಲಿ ಹಿರಿಯರು ಶಿಕ್ಷಣ ಪ್ರೇಮಿ ಸಚ್ಚಾರಿತ್ರೆ ಹೊಂದಿದ ವ್ಯಕ್ತಿ ದಿವಂಗತ ವಿ ಆರ್ ಕುಷ್ಟಗಿ ಅವರು ಸಂಸ್ಥಾಪಕ ಅಧ್ಯಕ್ಷರಾಗಿ ಅವರು ಸಲ್ಲಿಸಿದ ಸೇವೆ ಅವಿಸ್ಮರಣೀಯ. ಕುಷ್ಟಗಿ ಅವರ ಆತ್ಮೀಯ ಸ್ನೇಹಿತರಾದ ದಿವಂಗತ ಪ್ರೊಫೆಸರ್ ಡಿಎಸ್ ಕುರ್ತುಕೋಟಿಯವರು ಸಹ ಅದೇ ಪ್ರೀತಿ ಆಧಾರಗಳನ್ನು ತೋರಿಸಿ ಸಂಸ್ಥಾಪಕ ಪ್ರಾಚಾರ್ಯರಾಗಿ ಸಂಸ್ಥೆಯ ಕಾರ್ಯದರ್ಶಿಗಳಾಗಿ ಸಂಸ್ಥೆಯ ಬೆಳವಣಿಗೆಗೆ ಕಾಣಿಭೂತರಾಗಿದ್ದಾರೆ. ಸಂಸ್ಥೆಗೆ ಸೇವೆ ಸಲ್ಲಿಸಿರುವ ಇನ್ನೂರುವ ಶ್ರಮಜೀವಿಗಳು ದಿವಂಗತ ಎಲ್ಎ ಪೋತ್ನೆಸ್ ಅವರು ಸಲ್ಲಿಸಿದ ಅಮೋಘ ಸೇವೆ ಸ್ಮರಣೀಯವಾಗಿದೆ ಹೀಗಾಗಿ ಈ ಮಹಾನ್ ಪುರುಷರ ಹೆಸರುಗಳನ್ನು ಬಿ ಕಾಂ, ಬಿ ಬಿ ಎ, ಪಿಯುಸಿ ವಿಭಾಗಗಳಿಗೆ ಇಡಲಾಗಿದ್ದು ಅದರೊಂದಿಗೆ ಸಂಸ್ಥೆಯ ಬೆಳವಣಿಗೆಗೆ ಸಹಕಾರ ನೀಡಿದ ಶ್ರೀ ದೇವರಾಜ್ ಎಂ  ಭಾಗಮಾರ್ ಹೆಸರನ್ನು ಸ್ನಾತಕೋತರ ವಿಭಾಗಕ್ಕೆ ಇಡಲಾಗಿದ್ದು ಇವರೊಂದಿಗೆ ಅನೇಕ ಸಂಸ್ಥಾಪಕ ಸದಸ್ಯರು ಸಂಸ್ಥೆಯ ಬೆಳವಣಿಗೆಗೆ ಹಗಲಿರಳು ನಿಸ್ವಾರ್ಥ ಸೇವೆಯೇ ಮೂಲಕ ಸಂಸ್ಥೆಯನ್ನು ಬೆಳೆಸಿದ್ದಾರೆ ಅವರನ್ನು ಸ್ಮರಿಸುವ ಒಂದು ವಿಶೇಷ ವೇದಿಕೆ ಈ ದಿನ ಒದಗಿ ಬಂದಿದೆ.

ಸಂಸ್ಥೆಯ ಬೆಳವಣಿಗೆಗೆ ತನು-ಮನ ದನದಿಂದ ಸಹಕಾರ ನೀಡಿದವರು ಡಾ. ವಿಜಯ ಸಂಕೇಶ್ವರ್ , ಡಾ. ಎಚ್ ಕೆ ಪಾಟೀಲ್ , ಪ್ರೊ. ಎಸ್‌ ವಿ ಸಂಕನೂರ್ ಇವರನ್ನು ಇದೆ ಸಂದರ್ಭದಲ್ಲಿ ಸ್ಮರಿಸಿಕೊಂಡರು. ಶ್ರೀಯುತರು ತಮ್ಮ ಅನುದಾನದಲ್ಲಿ ಸಂಸ್ಥೆಗೆ ಧನ ಸಹಾಯ ಸಹಕಾರ ನೀಡಿದ್ದಾರೆ ಅಷ್ಟೇ ಅಲ್ಲದೆ ಡಾ ವಿಜಯ ಸಂಕೇಶ್ವರ್  ವಿ ಆರ್ ಎಲ್ ಫೌಂಡೇಶನ್ ಮೂಲಕ ಸುವರ್ಣ ಮಹೋತ್ಸವ ಭವನಕ್ಕೆ ಸಹಕಾರ ನೀಡಿದ್ದಾರೆ ಇಂತಹ ಶಿಕ್ಷಣ ಪ್ರೇಮಿಗಳಿಂದ ಹಾಗೂ ಸಂಸ್ಥೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳಿಂದ ಇಂದು ಸಂಸ್ಥೆ ಹೆಮ್ಮರವಾಗಿ ಬೆಳೆದು ನಿಂತಿದೆ ಎಂದು ತಮ್ಮ ಮಾತುಗಳಲ್ಲಿ ಹಂಚಿಕೊಂಡರು.

ಸಂಸ್ಥೆಯ ಚೇರ್ಮನ್ ಶ್ರೀ ಆನಂದ್ ಪೋತ್ನಿಸ್ ಅವರು ಮಾತನಾಡಿ ನಮ್ಮ ಸಂಸ್ಥೆಯ ವ್ಯವಹಾರ ಆಡಳಿತ ಮಹಾವಿದ್ಯಾಲಯ  25ನೆಯ ವರ್ಷಕ್ಕೆ ಪಾದರ್ಪಣೆ ಮಾಡಿದ್ದು ಹೀಗಾಗಿ ಇಡೀ ವರ್ಷ  ಅತ್ಯುತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಎ ಡಿ ಗೋಡ್ಕಿಂಡಿಯವರು  ಸಂಸ್ಥೆಯ ಅನೇಕ ವಿಚಾರಗಳನ್ನು ತಮ್ಮ ಮಾತುಗಳಲ್ಲಿ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರಾದ ಶ್ರೀ ವಿಜಯ ಬಾಗಮಾರ್, ಅಂಗ ಸಂಸ್ಥೆಗಳ ಪ್ರಾಚಾರ್ಯರಾದ ಪ್ರೊ. ಕೆ ಗಿರಿರಾಜ ಕುಮಾರ್ ಉಪ ಪ್ರಾಚಾರ್ಯರಾದ ಡಾ. ವಿ ಟಿ ನಾಯ್ಕರ್ ಪ್ರಾಚಾರ್ಯ ಆರ್ ಆರ್ ಕುಲಕರ್ಣಿ ಪ್ರಾಚಾರ್ಯ ಲಿಂಗರಾಜ್ ರಶ್ಮಿ , ಸಮಿತಿಯ ಅಧೀಕ್ಷಕರು ಶ್ರೀ ಪ್ರಾಣೇಶ್ ಬೆಳ್ಳಟ್ಟಿ ಅಂಗ ಸಂಸ್ಥೆಗಳ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ಈ ಸಂಸ್ಥಾಪಕ ದಿನಾಚರಣೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net