

ವಿಜಯವಾಣಿ ಸುದ್ದಿಜಾಲ ಗದಗ
ನಗರದ ಆದರ್ಶ ಸಮಿತಿಯ ಬಿಬಿಎ ಕಾಲೇಜಿನಲ್ಲಿ ಬುಧವಾರ ವಾಷಿರ್ಕೊತ್ಸವ ಹಾಗೂ ಪಾರಿತೋಷಕ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಎಸ್.ಬಿ.ಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಉಪನ್ಯಾಸಕರಾದ ಡಾ. ರಾಜೇಶ ಭದ್ರಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾಥಿರ್ಗಳ ನಡುವಳಿಕೆ ಹಾಗೂ ಆಸಕ್ತಿಯು ಅಧ್ಯಯನದ ಕಡೆಗೆ ಪೂರಕ ಆಗಿರಬೇಕು. ವಿದ್ಯಾಥಿರ್ಗಳು ಸಧೃಡ ಮನಸ್ಸಿನಿಂದ ಮತ್ತು ಏಕಾಗ್ರತೆಯಿಂದ ತಮ್ಮ ಜೀವನದ ಗುರಿ ತಲುಪಿ ದೇಶ ಕಟ್ಟುವಲ್ಲಿ ಕೊಡುಗೆ ಸಲ್ಲಿಸಬೇಕು. ವಿದ್ಯಾಥಿರ್ಗಳ ಆದ್ಯತೆ ಮತ್ತು ಗಮನ ಸಾಧನೆಯ ಕಡೆಗೆ ಇರಬೇಕು ಜತೆಗೆ ಸಾಧಿಸುವ ಬದ್ಧತೆ ಇರಬೇಕು ಎಂದರು.
ಶಿಕ್ಷಣ ಸಮಿತಿ ಕಾರ್ಯದಶಿರ್ ಎ.ಡಿ. ಗೋಡಖಿಂಡಿ ಮಾತನಾಡಿ, ವಿದ್ಯಾಥಿರ್ಗಳು ತಮ್ಮ ಸರ್ವತೋಮುಖ ಬೆಳವಣಿಗೆಯ ಕಡೆಗೆ ಗಮನ ಹರಿಸಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಕೆ.ವಿ.ಕುಷ್ಟಗಿ ಅಧ್ಯಕ್ಷತೆ ವಹಿಸಿದ್ದರು. ಲಿಂಗರಾಜ ರೇಶ್ಮಿ, ಶರೀ ಬೆನಕಲ್, ಬಿಂದುಶ್ರೀ .ಎಚ್, ಆದಿತ್ಯಾ ಜೋಶಿ, ಎ.ವೈ. ಇಂಚಲ್, ಆರ್. ಆರ್. ಕುಲಕಣಿರ್, ಪ್ರಶಾಂತ ಹೊಂಬಾಳಿ, ಕರಿಯಪ್ಪ ಕೊಡವಳ್ಳಿ, ಪ್ರಾಣೇಶ ಬೆಳ್ಳಟ್ಟಿ ಹಲವರು ಇದ್ದರು.