

Gadag: ನಗರದ ಆದರ್ಶ ಶಿಕ್ಷಣ ಸಮಿತಿಯ ಶ್ರೀ. ವಿ.ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಸ್ವಭಾವ ಸ್ವಚ್ಛತೆ ಸಂಸ್ಕಾರ ಸ್ವಚ್ಛತೆ ಕಾರ್ಯಕ್ರಮದ ಅಡಿಯಲ್ಲಿ ಗದಗ ಜಿಲ್ಲೆ ಅಂತೂರು ಬೆಂತೂರು ಪ್ರಾಥಮಿಕ ಶಾಲಾ ಆವರಣದಲ್ಲಿ ಸುಮಾರು 8000 ಅಷ್ಟು ಬೆಲೆ ಬಾಳುವ ಅಲಂಕಾರಿಕ ಒಂದು ನೂರು ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಣೆಯನ್ನು ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಗ್ರಾಮದ ಹಿರಿಯರಾದ ಶ್ರೀ ಎಸ್ ಎಲ್ ಬೆಸ್ಸಲ್ ರವರು ಮಾತನಾಡಿ ನರೇಂದ್ರ ಮೋದಿಯವರ ‘ಸ್ವಚ್ಛ ಭಾರತ’ ಅಭಿಯಾನದ ಉದ್ದೇಶವನ್ನು ಇಟ್ಟುಕೊಂಡು ದೇಶದ ಪ್ರತಿ ಮೂಲೆ ಮೂಲೆಯಲ್ಲಿರುವ ಗ್ರಾಮಗಳು ಸ್ವಚ್ಛತೆಯಿಂದ ಕಂಗಳಿಸುವ ಒಂದು ಉದ್ದೇಶವನ್ನು ಹೊಂದಿದ್ದಾರೆ. ಆ ಒಂದು ಕಾರ್ಯವನ್ನ ಯಶಸ್ವಿಗೊಳಿಸಿದವರು ಗದುಗಿನ ಎ ಎಸ್ ಎಸ್ ವಾಣಿಜ್ಯ ಮಹಾವಿದ್ಯಾಲಯದ ಎನ್ ಎಸ್ ಎಸ್ ಸ್ವಯಂಸೇವಕರು. ಕಾರಣ ಪ್ರತಿಯೊಬ್ಬರು ದೈನಂದಿನ ಜೀವನದಲ್ಲಿ ಸ್ವಚ್ಛತೆಯ ಉದ್ದೇಶ ಮತ್ತು ಮಹತ್ವವನ್ನು ನಾವು ನಮ್ಮ ಮಕ್ಕಳಿಗೆ ಕಲಿಸಬೇಕು.ಆರೋಗ್ಯಕರ ಜೀವನವನ್ನು ಹೊಂದುವುದು ಬಹಳ ಮುಖ್ಯ, ಮತ್ತು ಮೂಲಭೂತ ಶುಚಿತ್ವವು ಅದರಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಬದುಕಲು ಆಹಾರ, ನೀರು ಮತ್ತು ಬಟ್ಟೆಗಳಷ್ಟೇ ಅಗತ್ಯ. ನಾವು ವಸ್ತುಗಳನ್ನು ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ, ಅದು ವಿವಿಧ ರೀತಿಯ ಅನಾರೋಗ್ಯ, ರೋಗಗಳನ್ನು ಉಂಟುಮಾಡಬಹುದು ಮತ್ತು ನೊಣಗಳು, ಸೊಳ್ಳೆಗಳು ಮತ್ತು ಜಿರಳೆಗಳು ಗುಣಿಸಬಹುದಾದ ತಾಣಗಳನ್ನು ರಚಿಸಬಹುದು.
ಸ್ವಚ್ಛತೆ ಎನ್ನುವುದು ನಾವು ಬಲವಂತವಾಗಿ ಮಾಡಬೇಕಾದ ಕೆಲಸವಲ್ಲ. ಇದು ನಮ್ಮ ಆರೋಗ್ಯಕರ ಜೀವನಕ್ಕೆ ಉತ್ತಮ ಅಭ್ಯಾಸ ಮತ್ತು ಆರೋಗ್ಯಕರ ಮಾರ್ಗವಾಗಿದೆ. ವೈಯಕ್ತಿಕ ಸ್ವಚ್ಛತೆ, ಸುತ್ತಮುತ್ತಲಿನ ಶುಚಿತ್ವ, ಪರಿಸರ ಸ್ವಚ್ಛತೆ, ಸಾಕುಪ್ರಾಣಿಗಳ ಸ್ವಚ್ಛತೆ ಅಥವಾ ಕೆಲಸದ ಸ್ಥಳದ ಸ್ವಚ್ಛತೆ ಶಾಲೆ, ಕಾಲೇಜು, ಕಛೇರಿ, ಇತ್ಯಾದಿ ನಮ್ಮ ಉತ್ತಮ ಆರೋಗ್ಯಕ್ಕೆ ಎಲ್ಲಾ ರೀತಿಯ ಶುಚಿತ್ವವು ತುಂಬಾ ಅವಶ್ಯಕವಾಗಿದೆ ಇಂದು ಕೈಗೊಂಡ ಈ ವಿನೂತನ ಕಾರ್ಯಕ್ರಮ ಗ್ರಾಮಸ್ಥರಿಂದ ಮೆಚ್ಚುಗೆಯನ್ನು ಪಡೆದಿದೆ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಬಿ.ಪಿ ಜೈನರವರು ಮಾತನಾಡಿ ನಮ್ಮ ದೈನಂದಿನ ಜೀವನದಲ್ಲಿ ಶುಚಿತ್ವವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಕುರಿತು ನಾವೆಲ್ಲರೂ ಹೆಚ್ಚು ತಿಳಿದಿರಬೇಕು. ನಮ್ಮ ಅಭ್ಯಾಸದಲ್ಲಿ ಶುಚಿತ್ವವನ್ನು ಸೇರಿಸುವುದು ತುಂಬಾ ಸರಳವಾಗಿದೆ. ಸ್ವಚ್ಛತೆಯೊಂದಿಗೆ ನಾವು ಎಂದಿಗೂ ರಾಜಿ ಮಾಡಿಕೊಳ್ಳಬಾರದು, ಅದು ನಮಗೆ ಆಹಾರ ಮತ್ತು ನೀರಿನಷ್ಟೇ ಅವಶ್ಯಕ. ಇದನ್ನು ಬಾಲ್ಯದಿಂದಲೂ ಅಭ್ಯಾಸ ಮಾಡಬೇಕು, ಇದನ್ನು ಪ್ರತಿಯೊಬ್ಬ ಪೋಷಕರು ಮಾತ್ರ ಮೊದಲ ಮತ್ತು ಅಗ್ರಗಣ್ಯ ಜವಾಬ್ದಾರಿಯಾಗಿ ಪ್ರಾರಂಭಿಸಬಹುದು. ಇಂತಹ ಒಂದು ಒಳ್ಳೆಯ ಕಾರ್ಯವನ್ನು ಹಮ್ಮಿಕೊಳ್ಳಲು ಹಾಗೂ ಯಶಸ್ವಿ ಕಾಣಲು ಕಾರಣ ನನ್ನ ಮಹಾವಿದ್ಯಾಲಯದ ಸ್ವಯಂಸೇವಕ ಸೇವಕರು ಅವರಿಗೆ ಈ ಕಾರ್ಯಕ್ರಮದ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಶಾಲಾ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ದೈಹಿಕ ನಿರ್ದೇಶಕರಾದ ಶ್ರೀ.ಎ ವೈ ಅಂಗಡಿ. ಅಶ್ವತ್ಥಂ ಚವಡಿ, ಅಭಿಷೇಕ್ ನೆಲದುರ್ಗ, ಸಾಗರ್ ಪಾಟೀಲ್, ಮನೋಜ್ ದಲಬಂಜನ್ ಶಿವಯೋಗಿ ಗಡ್ಡದಮಠ, ಸ್ವಯಂಸೇವಕರಾದ, ಆದರ್ಶ ಅಕ್ಕಿ, ಅಭಿಷೇಕ್ ಮಾಗಡಿ, ಫಕೀರಜ್ಜ, ಸುನಿಲ್, ನೇತ್ರ, ಭಾಗ್ಯ , ಗೌರಿ, ಸಹನ ಹಾಗೂ ಗ್ರಾಮದ ಗುರು ಹಿರಿಯರು ಎನ್ ಎಸ್ ಎಸ್ ಸ್ವಯಂಸೇವಕ ಸೇವಕರು ಉಪಸ್ಥಿತರಿದ್ದರು.