ಆರೋಗ್ಯದ ಬಗ್ಗೆ ಕಾಳಜಿ ಅವಶ್ಯ : ಡಾ. ಎಸ್.ಬಿ.ಶೆಟ್ಟರ

Aashray Hospital
Published on

ಗದಗ : ವೈದ್ಯರು ಸಮಾಧಾನ ಮತ್ತು ಹಸನ್ಮುಖಿಯಾಗಿ ಚಿಕಿತ್ಸೆ ನೀಡುವುದರಿಂದ ರೋಗಿಯು ಬೇಗ ಗುಣಮುಖ ಆಗುವರು ಎಂದು ಗದುಗಿನ ಖ್ಯಾತ ವೈದ್ಯರಾದ ಡಾ.ಎಸ್.ಬಿ.ಶೆಟ್ಟರ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ನಗರದ ಆಶ್ರಯ ಆಸ್ಪತ್ರೆಯ ಸಭಾಂಗಣದಲ್ಲಿ ಎರ್ಪಡಿಸಿದ್ದ ೨೦೨೪ನೇ ಹೊಸ ವರ್ಷದ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಆಸ್ಪತ್ರೆಯೊಂದು ದಿನದರ್ಶಿಕೆಯನ್ನು ಬಿಡುಗಡೆ ಮಾಡಿ ಸಾರ್ವಜನಿಕರಿಗೆ ವಿತರಿಸುತ್ತಿರುವದು ಜನಪರ ಕಾಳಜಿಯನ್ನು ಅಭಿವ್ಯಕ್ತಗೊಳಿಸುವದು ಎಂದರು.
ತಜ್ಞ ವೈದ್ಯರು ರೋಗಿಯ ಕೆಲವು ಸಮಸ್ಯೆಗಳನ್ನು ಆಪ್ತಸಮಾಲೋಚನೆ, ಸಮಾಧಾನ ಮತ್ತು ಹಸನ್ಮುಖಿಯಾಗಿ ಮಾರ್ಗದರ್ಶನ ನೀಡುವ ಮೂಲಕ ಔಷದೋಪಚಾರ ಇಲ್ಲದೆಯೂ ಉಪಚರಿಸಲು ಸಾಧ್ಯವಿದೆ. ಸರ್ವರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವದು ಅವಶ್ಯವಿದೆ ಎಂದರು.
ವಾಸಣ್ಣ ಕುರಡಗಿ ಅವರ ಚಿರಂಜೀವಿ ಡಾ ಶ್ರೀಧರ ವಿ. ಕುರಡಗಿ ಮತ್ತು ಡಾ ಸುನೀತಾ ಎಸ್. ಕುರಡಗಿ ನೇತೃತ್ವದ ಗದಗಿನ ಆಶ್ರಯ ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರ ಸೇವೆಯನ್ನು ಶ್ಲಾಘಿಸಿದ ಡಾ.ಶೆಟ್ಟರ ಆಶ್ರಯ ಆಸ್ಪತ್ರೆಯಲ್ಲಿ ಇತ್ತೀಚಿನ ವೈದ್ಯಕೀಯ ಉಪಕರಣಗಳು ಮತ್ತು ಅವುಗಳು ಕಾಲಕಾಲಕ್ಕೆ ನವೀಕರಣವನ್ನು ಅವರು ಶ್ಲಾಘಿಸಿದರು. ಗದುಗಿನಲ್ಲಿ ಮೊಟ್ಟ ಮೊದಲು ಲೇಸರ್ ಉಪಕರಣ ತಂದು ಅದರ ಅನುಕೂಲತೆಗಳನ್ನು ರೋಗಿಗಳಿಗೆ ಮಾಡಿರುವದು ಒಂದು ಹೆಮ್ಮೆಯ ವಿಷಯ ಎಂದರಲ್ಲದೆ, ಆರೋಗ್ಯ ವೃತ್ತಿಪರರಿಗೆ ಸ್ವಯಂ ಕಾಳಜಿ ಮತ್ತು ಕುಟುಂಬದ ಸಮಯದ ಮಹತ್ವವನ್ನು ಹೇಳಿದರು.
ಈ ಸಂದರ್ಭದಲ್ಲಿ ಡಾ.ಶ್ರೀಧರ ಕುರಡಗಿ, ಡಾ.ಸುನೀತಾ ಎಸ್.ಕುರಡಗಿ, ಡಾ.ಪಿ.ವಿ.ಮರಗಿ, ಡಾ.ಮಧುಸೂಧನ್ ಪಿ.ಚಿಂತಾಮಣಿ ಹಾಗೂ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net