

ಹೆಬ್ರಿ: ಸಳ್ಳೆಕಟ್ಟೆ ಹಾಗೂ ಬಸದಿ ರಸ್ತೆ ಮೂಲಕ ಹೆಬ್ರಿ ಸಂಪರ್ಕಿಸುವ ರಸ್ತೆಗೆ ಕೊನೆಗೂ ಡಾಂಬರು ಅಳವಡಿಸಿರುವುದರಿಂದ ಹೊಂಡ ಗುಂಡಿಗಳಿಗೆ ಮುಕ್ತಿ ಸಿಕ್ಕಿದೆ. ಎರಡು ವರ್ಷಗಳಿಂದ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ತೊಂದರೆಯಾಗಿತ್ತು.
ಉಡುಪಿ ಸಣ್ಣ ನೀರಾವರಿ ಇಲಾಖೆಯವರು ಚಾರದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಿಸುವಾಗ, ಈ ರಸ್ತೆಯನ್ನು ಕುಂದಾಪುರ ಹಾಗೂ ಹೆಬ್ರಿ ಸಂಪರ್ಕಿಸಲು ಬದಲಿ ರಸ್ತೆಯನ್ನಾಗಿ ಬಳಸಿ, ಮಳೆಗಾಲದಲ್ಲಿ ಭಾರಿ ವಾಹನ ಸಂಚಾರದಿಂದ ರಸ್ತೆ ಹದಗೆಟ್ಟಿತ್ತು. ಈ ಕುರಿತು ವಿಜಯವಾಣಿ ವರದಿ ಪ್ರಕಟಿಸಿ, ಇಲಾಖೆಯನ್ನು ಎಚ್ಚರಿಸಿತ್ತು.
ರಸ್ತೆ ಹದಗೆಟ್ಟಾಗ ವಿಜಯವಾಣಿ ಆಗಾಗ ವರದಿ ಪ್ರಕಟಿಸಿ ಸಾಮಾಜಿಕ ಬದ್ಧತೆ ಮೆರೆದಿರುವುದಕ್ಕೆ ಧನ್ಯವಾದ. ಎರಡು ವರ್ಷ ರಸ್ತೆ ಹಾಳಾಗಿ ಅನೇಕ ಸಮಸ್ಯೆ ಎದುರಿಸಿದ್ದೆವು. ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. -ತಿಪ್ಪೇಸ್ವಾಮಿ, ಸ್ಥಳೀಯರು https://www.vijayavani.net/petition-released-at-sanur-temple https://www.vijayavani.net/health-check-up-camp-in-gangolli