ಅಸೂಟಿ ಗ್ರಾಪಂ ಅಧ್ಯಕ್ಷೆ ದಿಲ್‌ಶಾದ್

Holealuru
Published on

ಹೊಳೆಆಲೂರ: ಸಮೀಪದ ಅಸೂಟಿ ಗ್ರಾಪಂ ನೂತನ ಅಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ದಿಲ್‌ಶಾದ ಬೇಗಂ ಜಾಲಿಹಾಳ ಹಾಗೂ ಉಪಾಧ್ಯಕ್ಷೆಯಾಗಿ ಲಕ್ಷ್ಮವ್ವ ಚಲವಾದಿ ಆಯ್ಕೆಯಾಗಿದ್ದಾರೆ.

ಬಿಜೆಪಿ ಕಾರ್ಯಕರ್ತರು ಪರಸ್ಪರ ಬಣ್ಣ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಚುನಾವಣೆ ಅಧಿಕಾರಿಯಾಗಿ ವಿರೂಪಾಕ್ಷಯ್ಯ ಹಿರೇಮಠ, ಸಹಾಯಕರಾಗಿ ಬಸವರಾಜ ಗಿರಿತಮ್ಮನ್ನವರ ಕಾರ್ಯ ನಿರ್ವಹಿಸಿದರು.

ಶಶಿಧರ ದಿಂಡೂರ, ಸಂಪತಪ್ಪ ಕುಲಕರ್ಣಿ, ಹನಮಂತರಡ್ಡಿ ಬೆಳಕೊಪ್ಪದ, ಶರಣಪ್ಪ ಕುರಹಟ್ಟಿ, ವೀರಪಾಕ್ಷ ಕಸವನ್ನವರ, ಸಂಗನಗೌಡ ಪಾಟೀಲ, ವೀರೇಶ ದಿಂಡೂರ, ಶರಣಪ್ಪ ಕೊಣ್ಣೂರ, ರಾಜೇಶ್ವರಿ ದಿಂಡೂರ, ಮಹಾದೇವಿ ಇಮ್ರಾಪೂರ, ಅಕ್ಕಮ್ಮ ಕಬಾಡರ, ಶಾರವ್ವ ಪಾಟೀಲ, ಪರುತಗೌಡ ಪಾಟೀಲ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net