'ಎ' ಮತ್ತು 'ಬಿ' ಹುದ್ದೆಗಳ ಮಾಹಿತಿ ಕೇಳಿದ ಡಿಪಿಐಅರ್​

kpsc N
Published on

ಬೆಂಗಳೂರು: ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ರಾಜ್ಯದಲ್ಲಿ ಖಾಲಿಯಿರುವ ಗ್ರೂಪ್​ "ಎ' ಮತ್ತು "ಬಿ' ವೃಂದದ ಹುದ್ದೆಗಳ ಮಾಹಿತಿ ನೀಡುವಂತೆ ನೀಡುವಂತೆ ಸರ್ಕಾರದ ಇತರೆ ಇಲಾಖೆಗಳಿಂದ ಮಾಹಿತಿ ಕೋರಿದೆ.

ಕರ್ನಾಟಕ ಗೆಜೆಡೆಟ್​ ಪ್ರೊಬೇಷನರ್​ಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ಗ್ರೂಪ್​ "ಎ' ಮತ್ತು "ಬಿ' ವೃಂದದ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆ ಪ್ರತಿ ವರ್ಷ ನಡೆಸಬೇಕಾಗಿದೆ. ಅಲ್ಲದೆ, ಖಾಲಿಯಿರುವ ಹುದ್ದೆಗಳ ಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್​ಸಿ) ರವಾನಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀದಲ್ಲಿ ಖಾಲಿಯಿರುವ ಹುದ್ದೆಗಳ ಪಟ್ಟಿ ಸಲ್ಲಿಸುವಂತೆ ಒಳಾಡಳಿತ, ಆರ್ಥಿಕ, ಕಂದಾಯ , ಗ್ರಾಮೀಣಾಭಿವೃದ್ಧಿ,ಆಹಾರ ಮತ್ತು ನಾಗರೀಕ ಇಲಾಖೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸೂಚನೆ ನೀಡಿದೆ.

2011ನೇ ಸಾಲಿನ ಹುದ್ದೆಗಳನ್ನು ಹೊರತು ಪಡಿಸಿ ಎಂದು ಸ್ಪಷ್ಟವಾಗಿ ಸೂಚಿಸಿದೆ. ಏಕೆಂದರೆ, 2011ರ ನೇಮಕಾತಿ ಪ್ರಕ್ರಿಯೆ ಇನ್ನೂ ಹೈಕೋರ್ಟ್​ನಲ್ಲಿರುವುದರಿಂದ ಇದನ್ನು ಹೊರತಾಗಿ ಉಳಿದ ಹುದ್ದೆಗಳ ಮಾಹಿತಿ ನೀಡುವಂತೆ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net