ಬಂಟರ ಸಂಘದ ಅಧ್ಯಕ್ಷ ಸ್ಥಾನದ ಆಯ್ಕೆ ಅಸಿಂಧು: ರತ್ನಾಕರ ಶೆಟ್ಟಿ

WhatsApp Image 2023-02-07 at 2.40.39 PM
Published on

ಮಡಿಕೇರಿ: ಇತ್ತೀಚೆಗೆ ನಡೆದ ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಸ್ಥಾನದ ಆಯ್ಕೆ ಅಸಿಂಧುವಾಗಿದೆ ಎಂದು ಸಂಘದ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ತಿಳಿಸಿದರು.


ಈಗಾಗಲೇ ಸಂಘದ ಅಧ್ಯಕ್ಷ ಸ್ಥಾನದ ಆಯ್ಕೆ ನಡೆದು ಜಿಲ್ಲಾಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಲಾಗಿದೆ. ಆದರೆ, ಸಮುದಾಯದ ಕೆಲವರು ಸಂಘದ ಮಹಾಸಭೆ ಎಂದು ಹೇಳಿ ಅಧ್ಯಕ್ಷರ ಘೋಷಣೆ ಮಾಡಿದ್ದಾರೆ. ಈ ಹಿಂದೆ ನಡೆದ ಆಯ್ಕೆ ಪ್ರಕ್ರಿಯೆ ಸಂದರ್ಭ ಯಾವುದೇ ಸಭೆ, ಸಮಾರಂಭ ನಡೆಸದಂತೆ ನ್ಯಾಯಾಲಯ ತಡೆ ಇದ್ದರೂ ಕೂಡ ಕಾನೂನು ಉಲ್ಲಂಘಿಸಿ ಮಹಾಸಭೆ ನಡೆಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.


ಸಂಘದ ಭವನ ನಿರ್ಮಾಣ ಮಾಡಲು ದಾನಿಯೊಬ್ಬರು ತಾಳತ್ತಮನೆಯಲ್ಲಿ ನಿವೇಶನ ನೀಡಿದ್ದಾರೆ. ಇದನ್ನು ಕೆಲವರು ದುರ್ಬಳಕ್ಕೆ ಮಾಡಿಕೊಂಡ ಪರಿಣಾಮ ದಾನಿಗಳು ನ್ಯಾಯಾಲಯದ ಮೋರೆ ಹೋಗಿದ್ದಾರೆ. ಇದನ್ನು ಸಮುದಾಯ ಬಾಂಧವರಿಗೆ ತಿಳಿಸದೇ ವಂಚಿಸಿದ್ದಾರೆ. ಆಯ್ಕೆಯಾದ ಅಧ್ಯಕ್ಷರು ತಮ್ಮ ಆಡಳಿತ ಅವದಿಯಲ್ಲಿ ಸಮುದಾಯ ಭವನ ನಿರ್ಮಾಣ ಮಾಡುತ್ತೇನೆ ಎಂದು ಭರವಸೆ ನೀಡುತ್ತಾರೆ. ಆದರೆ ನ್ಯಾಯಲಯದ ಮೆಟ್ಟಿಲು ಹತ್ತಿರುವ ವಿಚಾರ ಇತ್ತೀಚೆಗೆ ಆಯ್ಕೆಯಾದ ಅಸಿಂಧು ಅಧ್ಯಕ್ಷರಿಗೆ ತಿಳಿಸದೇ ಮೋಸ ಮಾಡಿದ್ದಾರೆ ಎಂದರು.


ಮಹಾಸಭೆಯಲ್ಲಿ ನನ್ನನ್ನು ಉಚ್ಚಾಟನೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಉಚ್ಚಾಟನೆ ಮಾಡಲು ಇವರು ಯಾರು ಎಂದು ಪ್ರಶ್ನಿಸಿರುವ ಅವರು, ಉಚ್ಚಾಟನೆ ಅವಿವೇಕದ ಪರಮಾವಧಿಯಾಗಿದೆ. ಆಯ್ಕೆ ಸಂದರ್ಭ ಚುನಾವಣೆ ಘೋಷಣೆ ಮಾಡಬೇಕು. ಸಮಯ ನಿಗದಿ ಮಾಡಬೇಕು. ಇದ್ಯಾವುದು ಮಾಡದೇ ಆಯ್ಕೆ ಎಂದು ಇವರೇ ಘೋಷಣೆ ಮಾಡಿಕೊಂಡರೆ ಅರ್ಥವಿಲ್ಲ ಎಂದರು.


ಸುದ್ದಿಗೋಷ್ಠಿಯಲ್ಲಿ ಸಂಘದ ನಿಕಟ ಪೂರ್ವ ಅಧ್ಯಕ್ಷ ಬಿ.ಡಿ.ನಾರಾಯಣ, ಪ್ರಧಾನ ಕಾರ್ಯದರ್ಶಿ ಶಬರೀಶ್ ಶೆಟ್ಟಿ, ಗೌರವಾಧ್ಯಕ್ಷ ಬಾಲಕೃಷ್ಣ ರೈ, ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net