ಏಷಿಯಾ ಐಕಾನ್ ಪ್ರಶಸ್ತಿ ಸಮ್ಮೇಳನ: ಮೈಸೂರಿನ ಯೋಗ ಗುರು ಡಾ.ಬಿ.ಪಿ.ಮೂರ್ತಿ ಅವರಿಗೆ ಏಶಿಯಾ ಐಕಾನ್ ಪ್ರಶಸ್ತಿ ಪ್ರದಾನ

24
Published on

ಮೈಸೂರು: ಜೀ ಭಾರತ್ ವಾಹಿನಿ ಮತ್ತು ಆ್ಯನ್ ಹೆಲ್ಪ್ ವತಿಯಿಂದ ಇತ್ತೀಚೆಗೆ ಶ್ರೀಲಂಕಾದ ಕೊಲಂಬೊದಲ್ಲಿ ‘ಏಶಿಯಾ ಐಕಾನ್’ ಪ್ರಶಸ್ತಿ-2024 ಸಮ್ಮೇಳನ ನೆರವೇರಿತು.

ಸಮ್ಮೇಳನದಲ್ಲಿ ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಮಾಲ್ಡೀವ್ಸ್ ಮತ್ತು ಇಂಡೋನೇಷ್ಯಾ ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸಮ್ಮೇಳನದಲ್ಲಿ ವಿವಿಧ ವಿಷಯ ಕುರಿತು ವಿಚಾರ ಗೋಷ್ಠಿಗಳು ನೆರವೇರಿತು. ಜತೆಗೆ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ಯೋಗ ಕ್ಷೇತ್ರದಲ್ಲಿನ ಮೂರು ದಶಕಕ್ಕೂ ಹೆಚ್ಚಿನ ಕಾಲ ಮಾಡಿದ ಅವಿರತ ಸೇವೆ ಗುರುತಿಸಿ ಭಾರತದ ಪರವಾಗಿ ಮೈಸೂರಿನ ಯೋಗ ಗುರು ಡಾ.ಬಿ.ಪಿ.ಮೂರ್ತಿ ಅವರಿಗೆ ಏಶಿಯಾ ಐಕಾನ್ ಪ್ರಶಸ್ತಿ-2024 ನೀಡಿ ಗೌರವಿಸಲಾಯಿತು. ಶ್ರೀಲಂಕಾ ದೇಶದ ಮಾಜಿ ಪ್ರಧಾನಿ ಮಹೇಂದ್ರ ರಾಜಪಕ್ಷೆ, ವಿವಿಧ ದೇಶದ ಗಣ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net