ಕರ್ತವ್ಯದಲ್ಲಿದ್ದ ಎಎಸ್‌ಐ ಹೃದಯಾಘಾತಕ್ಕೆ ಬಲಿ

h5-lalsab miranayak death
Published on

ಹುಬ್ಬಳ್ಳಿ: ಇಲ್ಲಿಯ ನವನಗರ ಠಾಣೆಯ ಎಎಸ್‌ಐ ಲಾಲಸಾಬ್ ಮೀರಾನಾಯ್ಕ (55) ಗೋಕಾಕ್‌ನಲ್ಲಿ ಶನಿವಾರ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಇವರು ಮೂಲತಃ ಗದಗ ಜಿಲ್ಲೆ ಕೋಟುಮಚಗಿ ಗ್ರಾಮದವರು. ಇವರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ.

ಹುಬ್ಬಳ್ಳಿಯ ನವನಗರದ ಅಮರ ನಗರದಲ್ಲಿ ನೆಲೆಸಿದ್ದರು. ಗೋಕಾಕ್‌ನ ಮಹಾಲಕ್ಷ್ಮೀ ಜಾತ್ರೆಗೆ ಬಂದೋಬಸ್ತ್‌ಗಾಗಿ ಕಳೆದ ಐದು ದಿನಗಳ ಹಿಂದೆ ನಿಯೋಜಿಸಲಾಗಿತ್ತು. ಶನಿವಾರ ಬೆಳಗ್ಗೆ ಕರ್ತವ್ಯದಲ್ಲಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net