

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ರಾಮಾಪೂರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶುಕ್ರವಾರ ಜರುಗಿತು. ಅಧ್ಯಕ್ಷ ಸ್ಥಾನಕ್ಕೆ ಅಶ್ವಿನಿ ಹಡಪದ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾದರು ಎಂದು ಚುನಾವಣಾಽಕಾರಿಯಾಗಿದ್ದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ ಘೋಷಿಸಿದರು. ಸಹಾಯಕ ನಿರ್ದೇಶಕ ಗಿರೀಶ ಕೋರಿ, ಗ್ರಾ.ಪಂ. ಉಪಾಧ್ಯಕ್ಷ ಭಾಸ್ಕರ ಬಡಿಗೇರ, ಸದಸ್ಯರಾದ ಶಂಭನಗೌಡ ಪಾಟೀಲ, ಮಂಜುನಾಥಗೌಡ ಪಾಟೀಲ, ಸಂತೋಷ ಸಾವಳಗಿ, ಲಕ್ಷ್ಮೀ ಹರಿಜನ, ನಿಂಗಪ್ಪ ವಾಘ, ಅಭಿವೃದ್ಧಿ ಅಽಕಾರಿ ಆರ್.ಆರ್. ಪಾಟೀಲ ಹಾಗೂ ಗ್ರಾಮಸ್ಥ ಮುಖಂಡರಿದ್ದರು.