ಶತಮಾನಗಳ ಇತಹಾಸದ ಮಂಗಳೂರು ರಥಬೀದಿಯ ಅಶ್ವತ್ಥಮರ ಧರೆಗೆ

Published on

ಮಂಗಳೂರು: ನಗರದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಎದುರಿನ ಬೃಹತ್‌ ಅಶ್ವತ್ಧ ಮರ ಭಾನುವಾರ ಬೆಳಗ್ಗೆ 8 ಗಂಟೆ ವೇಳೆಗೆ ಧರೆಗೆ ಉರುಳಿದೆ. ಮರದಡಿ ನಿಲ್ಲಿಸಲಾಗಿದ್ದ ನೀರಿನ ಟ್ಯಾಂಕರ್‌, ಕ್ರೇನ್‌ ಮತ್ತು ಒಂದು ಕಾರಿಗೆ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮರಕ್ಕೆ ಶತಮಾನದ ಇತಿಹಾಸವಿದ್ದು, ರಥಬೀದಿಯ ಈ ಮರ ವೆಂಕಟರಮಣ ದೇವಳದ ರಥೋತ್ಸವ ಸಂದರ್ಭ ವಿಶೇಷ ಮೆರಗು ನೀಡಿತ್ತು. ಹಲವು ಮಂದಿ ಈ ಮರದೊಂದಿಗೆ ಬಾಂಧವ್ಯ ಹೊಂದಿದ್ದರು.

ಈ ಕುರಿತು ಶಾಸಕ ವೇದವ್ಯಾಸ ಕಾಮತ್‌ ಪ್ರತಿಕ್ರಿಯೆ ನೀಡಿದ್ದು, ಶೀಘ್ರದಲ್ಲೇ ಅಲ್ಲಿ ಇನ್ನೊಂದು ಅಶ್ವತ್ಥಗಿಡವನ್ನು ನೆಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅರಣ್ಯ ಇಲಾಖೆ. ಪೊಲೀಸ್‌, ಅಗ್ನಿಶಾಮಕ, ಪಾಲಿಕೆ, ಮೆಸ್ಕಾ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಮುಂದಿನ ವಾರ ದೇವಳದಲ್ಲಿ ರಥೋತ್ಸವ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net