ಗೆಲುವು ಸಾಧಿಸಿದ ಅಶ್ವಸೂರ್ಯ, ಜಿಎಲ್​ಆರ್​, ರಾಸು ವಾರಿಯರ್ಸ್​

TPL Cricket 3
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಇಲ್ಲಿನ ರಾಜನಗರ ಕೆಎಸ್​ಸಿಎ ಮೈದಾನದಲ್ಲಿ ಆಯೋಜಿಸಿರುವ ಟೆಲಿವಿಷನ್​ ಪ್ರೀಮಿಯರ್​ ಲೀಗ್​ (ಟಿಪಿಎಲ್​) ಕ್ರಿಕೆಟ್​ ಪಂದ್ಯಾವಳಿಗೆ ಬುಧವಾರ ಚಾಲನೆ ಸಿಕ್ಕಿದ್ದು, ಮೊದಲ ದಿನ ನಡೆದ ಪಂದ್ಯಗಳಲ್ಲಿ ಅಶ್ವಸೂರ್ಯ ರೈಡರ್ಸ್​, ಜಿಎಲ್​ಆರ್​ ವಾರಿಯರ್ಸ್​, ರಾಸು ವಾರಿಯರ್ಸ್​ ತಂಡ ಜಯಗಳಿಸಿವೆ.
ಅಶ್ವಸೂರ್ಯ ರೈಡರ್ಸ್​ ಹಾಗೂ ಎವಿಆರ್​ ಟಸ್ಕರ್ಸ್​ ತಂಡಗಳ ಮಧ್ಯೆ ನಡೆದ ಉದ್ಘಾಟನಾ ಪಂದ್ಯದಲ್ಲಿ ಸಂಟಿತ ಹೋರಾಟ ಪ್ರದಶಿರ್ಸಿದ ಅಶ್ವಸೂರ್ಯ ರೈಡರ್ಸ್​ 53 ರನ್​ಗಳ ಗೆಲುವು ಸಾಧಿಸಿತು. ಟಾಸ್​ ಸೋತರೂ ಮೊದಲು ಬ್ಯಾಟಿಂಗ್​ ಮಾಡುವ ಅವಕಾಶ ಪಡೆದ ಅಶ್ವಸೂರ್ಯ ರೈಡರ್ಸ್​ ತಂಡ, ರಂಜಿತಕುಮಾರ (36 ರನ್​) ಹಾಗೂ ಶಶಾಂಕ ಸಿಂಹ (30) ಅಮೋ ಬ್ಯಾಟಿಂಗ್​ ಪ್ರದರ್ಶನದಿಂದ ನಿಗದಿತ 12 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 129ರನ್​ಗಳ ಬೃಹತ್​ ಮೊತ್ತ ಪೇರಿಸಿತು. ಎವಿಆರ್​ ಟಸ್ಕರ್ಸ್​ ಪರ ಚೇತನ ಸೂರ್ಯ (30ಕ್ಕೆ 3) ಉತ್ತಮ ಬಾಲಿಂಗ್​ ಪ್ರದಶಿರ್ಸಿದರು.
ಕಠಿಣ ಸವಾಲು ಎದುರಿಸುವ ಹುಮ್ಮಸ್ಸಿನಿಂಲೇ ಕಣಕ್ಕಿಳಿದ ಎವಿಆರ್​ ಟಸ್ಕರ್ಸ್​ ಬ್ಯಾಟ್ಸಮನ್​ಗಳು ಆರಂಭದಿಂದಲೇ ನಿರಾಸೆ ಅನುಭವಿಸಿದರು. ತಂಡದ ಪರ ವಿ.ಜೆ. ಶರತ (18), ಹರೀಶ ನಾಗರಾಜು (15), ರಾಮ ಪವನ (12) ಬಿಟ್ಟರೆ ಉಳಿದವರು ಎರಡಂಕಿ ದಾಟುವಲ್ಲಿ ವಿಲರಾದರು. ಅಶ್ವಸೂರ್ಯ ರೈಡರ್ಸ್​ ತಂಡ ಬಾಲಿಂಗ್​ ಹಾಗೂ ಕ್ಷೇತ್ರ ರಕ್ಷಣೆಯಲ್ಲಿ ಸಂಟಿತ ಹೋರಾಟ ನಡೆಸಿ 8 ಎಸೆತಗಳು ಬಾಕಿ ಇರುವಾಗಲೇ ಎದುರಾಳಿ ತಂಡವನ್ನು 76 ರನ್​ಗಳಿಗೆ ಆಲ್​ಔಟ್​ ಮಾಡಿ 53 ರನ್​ಗಳಿಂದ ಗೆಲುವಿನ ನಗೆ ಬೀರಿತು. ಅಶ್ವಸೂರ್ಯ ರೈಡರ್ಸ್​ ನಾಯಕ ಹರ್ಷಾ ಸಿಎಂ ಗೌಡ (30ಕ್ಕೆ3) ಹಾಗೂ ಪ್ರೀತಂ (18ಕ್ಕೆ2) ಉತ್ತಮ ಬಾಲಿಂಗ್​ ಪ್ರದಶಿರ್ಸಿ ತಂಡದ ಗೆಲುವಿಗೆ ಕಾರಣರಾದರು.
ನಂತರ ನಡೆದ ಜಿಎಲ್​ಆರ್​ ವಾರಿಯರ್ಸ್​ ಹಾಗೂ ಇನ್ಸೇನ್​ ಕ್ರಿಕೆಟ್​ ತಂಡಗಳ ನಡುವಿನ ಪಂದ್ಯದಲ್ಲಿ ಜಿಎಲ್​ಆರ್​ ವಾರಿಯರ್ಸ್​ 7 ವಿಕೆಟ್​ಗಳ ಭರ್ಜರಿ ಜಯಗಳಿಸಿತು. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ಗೆ ಇಳಿದ ಇನ್ಸೇನ್​ ಕ್ರಿಕೆಟ್​ ತಂಡ ಮನುಕುಮಾರ (13ಕ್ಕೆ 4) ಬಿಗಿ ಬೌಲಿಂಗ್​ ದಾಳಿಗೆ ಕುಸಿದು 9 ವಿಕೆಟ್​ ನಷ್ಟಕ್ಕೆ 99 ರನ್​ಗಳ ಸಾಧಾರಣ ಮೊತ್ತ ಪೇರಿಸಿತ್ತು. ತಂಡದ ಪರ ಸಂದೀಪ ಭಕ್ತ (21), ಅಂಜನ್​ ಭಾರದ್ವಾಜ (16) ಉತ್ತಮ ಪ್ರದರ್ಶನ ತೋರಿದರು. ಪ್ರತಿಯಾಗಿ ರಾಜೇಶ (ಅಜೇಯ 50) ಹಾಗೂ ನಾಯಕ ಯೋಗಿ (24) ಒದಗಿಸಿದ ಬಿರುಸಿನ ಆರಂಭದ ನೆರವಿನಿಂದ 3 ವಿಕೆಟ್​ಗೆ 103 ರನ್​ ಗಳಿಸಿ ಗೆಲುವಿನ ಕೇಕೆ ಹಾಕಿತು. ಇನ್ಸೇನ್​ ಕ್ರಿಕೆಟ್​ ತಂಡದ ವ್ಯಾಸರಾಜ ಸೋಸಲೆ (22ಕ್ಕೆ3) ಉತ್ತಮ ಬೌಲಿಂಗ್​ ಪ್ರದಶಿರ್ಸಿದರು.
ಗೋಲ್ಡನ್​ ಈಗಲ್ಸ್​ ಹಾಗೂ ರಾಸು ವಾರಿಯರ್ಸ್​ ಮಧ್ಯೆ ನಡೆದ 3ನೇ ಪಂದ್ಯದಲ್ಲಿ ರಾಸು ವಾರಿಯರ್ಸ್​ ತಂಡವು ನಾಯಕ ದಿಲೀಪ ಕೆ. ಗೌಡ (ಅಜೇಯ 74) ಅಮೋ ಬ್ಯಾಟಿಂಗ್​ ಪ್ರದರ್ಶನದಿಂದ 8 ವಿಕೆಟ್​ಗಳ (106ಕ್ಕೆ 2)ಭರ್ಜರಿ ಜಯ ಸಾಧಿಸಿದೆ. ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಗೋಲ್ಡನ್​ ಈಗಲ್ಸ್​ ತಂಡ ಆರಂಭಿಕ ಆಘಾತ ಕಂಡರೂ ಕಿನ್ನಿ ವಿನೋದ (48 ಅಜೇಯ) ಹಾಗೂ ವಿವಾನ್​ (21) ಆಸರೆಯೊಂದಿಗೆ 7 ವಿಕೆಟ್​ಗೆ 105 ರನ್​ಗಳ ಉತ್ತಮ ಮೊತ್ತ ಪೇರಿಸಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್​ ನಡೆಸಿದ ರಾಸು ತಂಡ 6 ರನ್​ಗೆ 1 ವಿಕೆಟ್​ ಕಳೆದುಕೊಂಡು ಆಘಾತ ಅನುಭವಿಸಿತ್ತು. ಆಗ ಬ್ಯಾಟಿಂಗ್​ಗೆ ಆಗಮಿಸಿದ ನಾಯಕ ದಿಲೀಪ ಕೆ. ಗೌಡ 27 ಬಾಲ್​ಗಳಲ್ಲಿ 74 ರನ್​ಗಳಿಸಿ (7 ಬೌಂಡರಿ, 5 ಸಿಕ್ಸರ್​) ಇನ್ನೂ 26 ಎಸೆತಗಳು ಬಾಕಿ ಇರುವಾಗಲೇ 8 ವಿಕೆಟ್​ಗಳು ಗೆಲುವು ಸಾಧಿಸುವಂತೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net