ಅಶ್ವಾರೂಢಾ ಕಾತ್ಯಾಯಿನೀ ಅಲಂಕಾರ

kls1 (14)
Published on

ಕಳಸ: ಹೊರನಾಡು ಅನ್ನಪೂಣೇಶ್ವರಿಯನ್ನು ದೇವಿಯ ಎಂಟನೇ ಅವತಾರ ಅಶ್ವಾರೂಢಾ ಕಾತ್ಯಾಯಿನೀ ಅಲಂಕಾರ ಮಾಡಿ ಪೂಜಿಸಲಾಯಿತು. ಬೆಳಿಗ್ಗೆಯಿಂದಲೇ ಧಾರ್ಮಿಕ ವಿವಿಧಾನಗಳು ಪ್ರಾರಂಭಗೊಂಡು ಸಪ್ತಶತಿ ಪಾರಾಯಣ, ನಾಲ್ಕು ವೇದಗಳ ಪಾರಾಯಣ, ಸುಂದರಕಾಂಡ ಪಾರಾಯಣ,ಶ್ರೀ ದೇವೀ ಭಾಗವತಾ ಪಾರಾಯಣ, ಕುಂಕುಮಾರ್ಚನೆ ಮತ್ತು ಶ್ರೀವಾಗೀಶ್ವರಿ ಮೂಲಮಂತ್ರ ಹೋಮ, ಶಾರದಾ ಪೂಜೆ ನಡೆಯಿತು.ಹೋಮದ ಪೂರ್ಣಹುತಿಯನ್ನು ದೇವಸ್ಥಾನದ ಧರ್ಮಕರ್ತರಾದ ಜಿ.ಭೀಮೇಶ್ವರ ಜೋಷಿ ದಂಪತಿಗಳು ನೆರವೇರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ವ್ಯಾನ ಪ್ರೊಡಕ್ಷನ್ಸ್ ತಂಡದವರು ಬೆಂಗಳೂರು, ಇವರಿಂದ ಭಕ್ತಿ ಭಾವ ಸಂಗೀತ, ಸಂಜೆ ಸ್ವಯಂ ಅಕಾಡೆಮಿ ಾರ್ ರ್ಪಾಮಿಂಗ್ ಆರ್ಟ್ಸ್ ವಿದುಷಿ ದಿವ್ಯ.ಕೆ ಮತ್ತು ತಂಡದಿಂದ ಭರತ ನಾಟ್ಯ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net