

ಬೆಂಗಳೂರು: ಹೊಸವಿನ್ಯಾಸ ಹಾಗೂ ಹೊಸಬ್ರಾಂಡ್‌ನ ಪಾಯಿಂಟ್ ಟು ಪಾಯಿಂಟ್ ಎಕ್ಸ್‌ಪ್ರೆಸ್ ‘ಅಶ್ವಮೇಧ ಕ್ಲಾಸಿಕ್’ ಕರ್ನಾಟಕ ಸಾರಿಗೆ ಬಸ್ ಸಂಚಾರಕ್ಕೆ ಸಿದ್ಧವಾಗಿದ್ದು, ಇದಕ್ಕೆ ಸೋಮವಾರ ಅಧಿಕೃತ ಚಾಲನೆ ದೊರೆಯಲಿದೆ.
೩.೪೨ ಮೀಟರ್ ಎತ್ತರ ಇರುವ ಅಶ್ವಮೇಧ (ಕ್ಲಾಸಿಕ್) ಬಸ್ ಅನ್ನು ಪ್ರಯಾಣದ ಮರು ಕಲ್ಪನೆ ಎಂಬ ೋಷವಾಕ್ಯದೊಂದಿಗೆ ಪರಿಚಯಿಸಿಲಾಗುತ್ತಿದೆ. ಈ ಬಸ್‌ನಲ್ಲಿ ೫೨ ಆಸನಗಳಿದ್ದು, ಬಕೆಟ್ ಟೈಪ್ ವಿನ್ಯಾಸವನ್ನು ಹೊಂದಿವೆ. ವಾಹನದ ಮುಂದಿನ ಮತ್ತು ಹಿಂದಿನ ಗಾಜು ವಿಶಾಲವಾಗಿದೆ. ಕಿಟಕಿ ್ರೇಮ್ ಹಾಗೂ ಮೇಲಿನ ಗಾಜು ದೊಡ್ಡದಾಗಿದ್ದು, ಟೆಂಟೆಡ್ ಗಾಜುಗಳನ್ನು ಹೊಂದಿವೆ. ವಾಹನದ ಒಳಾಂಗಣದ ಲಗೇಜ್ ಕ್ಯಾರಿಯರ್ ಅನ್ನು ವಿನೂತನವಾಗಿ ವಿನ್ಯಾಸ ಮಾಡಲಾಗಿದೆ. ಒಳಾಂಗಣದಲ್ಲಿ ನಿರಂತರ ಉರಿಯುವ ಎಲ್‌ಇಡಿ ದೀಪಗಳಿವೆ. ಎಲ್‌ಇಡಿ ಮಾರ್ಗಲಕ ಇದೆ. ಸ್ವಯಂಚಾಲಿತ ಬಾಗಿಲುಗಳು ಮತ್ತು ತುರ್ತುಬಟನ್ ವ್ಯವಸ್ಥೆ ಇದೆ. ಈ ಬಸ್‌ಗಳು ಎಲ್ಲ ಜಿಲ್ಲಾ ಕೇಂದ್ರಗಳಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲಿವೆ. ಅಶ್ವಮೇಧ ಕ್ಲಾಸಿಕ್ ಹೊಸ ವಿನ್ಯಾಸದ ೮೦೦ ಕರ್ನಾಟಕ ಸಾರಿಗೆ ಬಸ್ಸುಗಳನ್ನು ಮೇ-೨೦೨೪ರ ಅಂತ್ಯದೊಳಗೆ ಸಾರ್ವಜನಿಕರ ಸೇವೆಗೆ ಕಾರ್ಯಾಚರಣೆ ಮಾಡಲು ಉದ್ದೇಶಿಸಿದ್ದು, ಈ ಪೈಕಿ ಮೊದಲ ಹಂತದಲ್ಲಿ ೧೦೦ ಬಸ್ಸುಗಳಿಗೆ ಚಾಲನೆ ನೀಡಲಾಗುತ್ತಿದೆ.
ಇಂದು ಚಾಲನೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧ ಪೂರ್ವದಾರದ ಮುಂಭಾಗ ಸೋಮವಾರ ೧೦೦ ಅಶ್ವಮೇಧ ಬಸ್‌ಗಳಿಗೆ ಚಾಲನೆ ನೀಡಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ ಭಾಗವಹಿಸಲಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.