ಆಶೂರ್‌ಖಾನ್ ಸ್ಥಳಕ್ಕೆ 9/11ಎ ನೀಡಬೇಡಿ

28 kmp 04
ಕಂಪ್ಲಿ ತಾಪಂ ಇಒ ಆರ್.ಕೆ.ಶ್ರೀಕುಮಾರ್‌ಗೆ ಬೆಳಗೋಡ್‌ಹಾಳ್ ಗ್ರಾಮಸ್ಥರು ಮನವಿ ಸಲ್ಲಿಸಿದರು. ಪ್ರಮುಖರಾದ ಪಿ.ಶಂಭುಲಿಂಗ, ಜಿ.ತಿಪ್ಪೇಶಸ್ವಾಮಿ, ಹೂಗಾರ್ ಅಯ್ಯಪ್ಪ, ಎಮ್ಮಿಗನೂರು ಮಲ್ಲಿಕಾರ್ಜುನ, ನೆನಕಿ ಗೋವಿಂದಪ್ಪ ಇತರರಿದ್ದರು.
Published on

ಕಂಪ್ಲಿ: ತಾಲೂಕಿನ ನಂ.10 ಮುದ್ದಾಪುರ ಗ್ರಾಪಂ ವ್ಯಾಪ್ತಿಯ ಬೆಳಗೋಡ್‌ಹಾಳ್ ಗ್ರಾಮದ ಆಶೂರ್‌ಖಾನ್(ಸುನ್ನಿ) ಸ್ಥಳ ಸರ್ವ ಸಮುದಾಯದವರಿಗೆ ಸೇರಿದ್ದು, ಇದರ ಇ-ಸ್ವತ್ತು ನಮೂನೆ 9/11ಎ ನೀಡಬಾರದು ಎಂದು ಬೆಳಗೋಡ್‌ಹಾಳ್ ಗ್ರಾಮಸ್ಥರು ಸೋಮವಾರ ತಾಪಂ ಇಒ ಆರ್.ಕೆ.ಶ್ರೀಕುಮಾರ್‌ಗೆ ಮನವಿ ಸಲ್ಲಿಸಿದರು.

ಕಂಪ್ಲಿ ಬಿಜೆಪಿ ಮುಖಂಡ ಪಿ.ಶಂಭುಲಿಂಗ ಮಾತನಾಡಿ, ಬೆಳಗೋಡ್‌ಹಾಳ್ ಗ್ರಾಮಸ್ಥರು ಆಶೂರ್‌ಖಾನ್‌ನಲ್ಲಿ ಭಾವೈಕ್ಯದಿಂದ ಮೊಹರಂ ಆಚರಿಸುತ್ತಿದ್ದು, ಇಲ್ಲಿ ಪೇಟಾರಿ ಇಡಲು, ದೇವರು ಕೂಡಿಸುತ್ತಾರೆ. ಈ ಸ್ಥಳವನ್ನು ಕೆಲ ಮುಸ್ಲಿಮರು ವಕ್ಫ್‌ಗೆ ಸೇರಿಸುವ ಹುನ್ನಾರದಿಂದ ನಮೂನೆ 9/11ಎ ಕೋರುತ್ತಿರುವ ವಿಷಯ ತಿಳಿದುಬಂದಿದೆ. ಆದ್ದರಿಂದ ವಕ್ಫ್‌ಗೆ ಸೇರಿಸಲು 9/11ಎ ನೀಡಬಾರದು. ಅಲ್ಲದೆ ಇಲ್ಲಿ ಮೊದಲಿನಿಂದಲೂ ಆಜಾನ್‌ಗೆ ಧ್ವನಿವರ್ಧಕ ಬಳಸುತ್ತಿಲ್ಲ. ಇದಕ್ಕಾಗಿ ಹೊಸದಾಗಿ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು. ಮುಖಂಡರಾದ ಜಿ.ತಿಪ್ಪೇಸ್ವಾಮಿ, ಹೂಗಾರ್ ಅಯ್ಯಪ್ಪ, ಎಮ್ಮಿಗನೂರು ಮಲ್ಲಿಕಾರ್ಜುನ, ನೆನಕಿ ಗೋವಿಂದಪ್ಪ, ತಳವಾರ ಶಿವು, ರಾಮಸಾಗರ ಪರಶುರಾಮ, ಛಲವಾದಿ ದೇವಪ್ಪ, ಓಂಕಾರಿ ಹರಿಜನ, ಪರಶುರಾಮ ತಳವಾರ, ಕೃಷ್ಣ ಕುರುಬರ, ಚಂದ್ರಶೇಖರಗೌಡ, ದುರುಗಪ್ಪ, ಕೆ.ರಾಜಪ್ಪ, ರೇಣುಕಪ್ಪ ರಾಮಸಾಗರ, ಹರೀಶ್ ಚಿತ್ರಗಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net