

ಮುದಗಲ್: ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರ ಉತ್ತರಾರಾಧನೆ ಕಾರ್ಯಕ್ರಮ ಶ್ರದ್ಧೆ ಭಕ್ತಿಯಿಂದ ನೆರವೇರಿತು.
ಬೆಳಗ್ಗೆಯಿಂದ ಪೂಜಾ ಕಾರ್ಯಕ್ರಮಗಳು ಹಾಗೂ ಬೃಂದಾವನಕ್ಕೆ ವಿಶೇಷ ಅಲಂಕಾರ ಸೇವೆ ನಡೆದವು. ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ಅರ್ಚಕರಾದ ಮಧ್ವಾಚಾರ್ಯ, ಸೇತುರಾಮಾಚಾರ್ಯ ಸಾನಿಧ್ಯದಲ್ಲಿ ಜರುಗಿದವು. ಪಲ್ಲಕ್ಕಿ ಸೇವೆ, ಭಜನೆ, ನೃತ್ಯ ಸೇವೆ, ತೊಟ್ಟಿಲು ಸೇವೆ ನಡೆದವು.
ಭಜನಾ ಪದಗಳ ಗಾಯನ ಹಾಗೂ ಕೋಲಾಟದ ನೃತ್ಯ ಪ್ರದರ್ಶಿಸಲಾಯಿತು. ಮಠದ ಅಧ್ಯಕ್ಷ ನಾರಾಯಣರಾವ್ ದೇಶಪಾಂಡೆ, ಡಾ.ಎಂ.ವಿ. ಜೋಷಿ, ಡಾ.ಜಿ.ಆರ್.ದೇಶಪಾಂಡೆ, ವಿ.ಎಸ್. ಶೆಡ್ಲಿಗೇರಿ, ಹರ್ಷ ಮುತಾಲಿಕ್, ಗುರುರಾಜ ದೇಶಪಾಂಡೆ, ಹನುಮೇಶ್ ಪಟವಾರಿ, ಅನಂತರಾವ್ ದೇಶಪಾಂಡೆ, ಪ್ರಾಣೇಶ ಮುತಾಲಿಕ, ಪ್ರಲ್ಲಾದ್ ರಾವ್ ಮುತಾಲಿಕ, ವೆಂಕಟೇಶ ಕುಲಕರ್ಣಿ ಇತರರಿದ್ದರು.