ಅಷ್ಟವಿನಾಯಕ ಸ್ಪರ್ಧೆ ಬಹುಮಾನ ವಿತರಣೆ, ಗಣೇಶೋತ್ಸವದ ಮೆರುಗು ಹೆಚ್ಚಿಸಿದ ವಿಜಯವಾಣಿ

IMG-20230927-WA0010.jpg
Published on

ಹುಬ್ಬಳ್ಳಿ: ಕನ್ನಡದ ನಂಬರ್ 1 ಪತ್ರಿಕೆ ವಿಜಯವಾಣಿಯು ಕಳೆದ 11 ವರ್ಷಗಳಿಂದ ಏರ್ಪಡಿಸುತ್ತ ಬಂದಿರುವ ಅಷ್ಟವಿನಾಯಕ ಸ್ಪರ್ಧೆಯಿಂದಾಗಿ ವಾಣಿಜ್ಯ ನಗರಿ ಹುಬ್ಬಳ್ಳಿಯ ಸಾರ್ವಜನಿಕ ಶ್ರೀ ಗಣೇಶೋತ್ಸವದ ಮೆರುಗು ಹೆಚ್ಚಾಗಿದೆ ಎಂಬ ಅಭಿಪ್ರಾಯ ಜನರಿಂದ ವ್ಯಕ್ತವಾಯಿತು.

ದೇಶಪಾಂಡೆನಗರದ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ವಿಜೇತ ಸಮಿತಿಗಳಿಗೆ ಆಯೋಜಿಸಿದ್ದ ಬಹುಮಾನ ವಿತರಣೆ ಸಮಾರಂಭದಲ್ಲಿ ನೂರಾರು ಜನರು ಸಂಭ್ರಮದಿಂದ ಪಾಲ್ಗೊಂಡು ಹಬ್ಬದಂತೆ ಆಚರಿಸಿದರು.

ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ರಾಜ್ಯದ ಗಮನ ಸೆಳೆದಿದೆ. ಅಲಂಕಾರ, ಬೃಹತ್ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಉತ್ಸವವು ರಂಗು ಪಡೆಯುತ್ತದೆ. ಇಂತಹ ಉತ್ಸವದಲ್ಲಿ ವಿಜಯವಾಣಿ ಪತ್ರಿಕೆ ಆರಂಭವಾದಾಗಿನಿಂದಲೂ ಜೋಡಿಸಿಕೊಂಡಿದೆ. ಈ ವರ್ಷವೂ ಉತ್ಸವ ಸಮಿತಿ, ಮಂಡಳಿಯವರು ಪತ್ರಿಕೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಹುಮ್ಮಸ್ಸಿನಿಂದ ಪಾಲ್ಗೊಂಡು ಬಹುಮಾನ ಪಡೆದರು.

ಇಂತಹ ಸಂಭ್ರಮದ ಗಳಿಗೆಗೆ ಅತಿಥಿಗಳಾಗಿದ್ದ ಶಾಸಕ ಮಹೇಶ ಟೆಂಗಿನಕಾಯಿ ಅವರು, ಪ್ರವಾಸೋದ್ಯಮ ದಿನದಂದೇ ವಿಜಯವಾಣಿ ಹಮ್ಮಿಕೊಂಡಿರುವ ಅಷ್ಟವಿನಾಯಕ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವು ಹುಬ್ಬಳ್ಳಿಗೆ ವಿಶೇಷ ಮೆರಗು ತಂದಿದೆ. ರಾಜ್ಯದ ಗಮನ ಸೆಳೆದಿರುವ ಸಾರ್ವಜನಿಕ ಗಣೇಶೋತ್ಸವ ಇನ್ನಷ್ಟು ಉತ್ತಮಗೊಳ್ಳಲು ಇದು ಪ್ರೇರಣೆ ನೀಡಿದೆ. ಈ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ವಿಆರ್ಎಲ್ ಸಂಸ್ಥೆಯವರು ಪ್ರಸ್ತುತಪಡಿಸಿದ್ದಾರೆ. ಜನರಲ್ಲಿ ಹೊಸತನ ತರುವ ಕೆಲಸ ಮಾಡಿದ್ದಾರೆ ಎಂದರು.

ಇಂತಹ ಕಾರ್ಯಕ್ಕೆ ಪ್ರೋತ್ಸಾಹ ನೀಡುತ್ತಿರುವ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಅವರು ಅಭಿನಂದನಾರ್ಹರು ಎಂದು ಶಾಸಕರು ಹೇಳಿದರು.

ಶಾಸಕ ಪ್ರಸಾದ ಅಬ್ಬಯ್ಯ ಅವರು ಮಾತನಾಡಿ, ಮುಂಬೈ ಬಿಟ್ಟರೆ ಹುಬ್ಬಳ್ಳಿ ಧಾರವಾಡದಲ್ಲೇ ಸಾರ್ವಜನಿಕ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಇಂತಹ ಆಚರಣೆಗೆ ವಿಜಯವಾಣಿ ಸಾಥ್ ನೀಡಿ ಅವಳಿನಗರದಲ್ಲಿ ಸೌಹಾರ್ದತೆ ಬೆಳೆಸಲು ನೆರವಾಗಿದೆ. ಉತ್ಸವಕ್ಕೆ ಹೊಸತನ ತಂದಿದೆ.

ಆಧುನಿಕ ಮಾಧ್ಯಮಗಳು ಎಷ್ಟೇ ಪ್ರಬಲವಾದರೂ ಮುದ್ರಣ ಮಾಧ್ಯಮದ ಪ್ರಭಾವ ಕಡಿಮೆ ಆಗಿಲ್ಲ. ಪತ್ರಿಕೆಗಳು ಸ್ಮರಣ ಶಕ್ತಿ ಹೆಚ್ಚಿಸುತ್ತವೆ ಎಂದರು.

ಮೇಯರ್ ವೀಣಾ ಬರದ್ವಾಡ ಅವರು ಮಾತನಾಡಿ, ವಿಜಯವಾಣಿ ಪತ್ರಿಕೆಯು ತನ್ನ ವೃತ್ತಿಯೊಂದಿಗೆ ಸಾಮಾಜಿಕ ಕಾಳಜಿಯನ್ನು ಪ್ರಸ್ತುತಪಡಿಸಿದೆ. ಕಳೆದ 11 ವರ್ಷದಿಂದ ಗಣೇಶೋತ್ಸವದಲ್ಲಿ ಭಾಗಿಯಾಗಿ ಉತ್ಸವ ಸಮಿತಿಗಳ ಮಧ್ಯೆ ಸ್ಪರ್ಧಾತ್ಮಕ ಮನೋಭಾವ ಬೆಳೆಸಿದೆ. ಇದರಿಂದ ಉತ್ತಮ ಅಲಂಕಾರ, ವಿಗ್ರಹ ಪ್ರತಿಷ್ಠಾಪನೆಯ ಹುಮ್ಮಸ್ಸು ಅಧಿಕಗೊಂಡಿದೆ ಎಂದರು.

ಅಷ್ಟವಿನಾಯಕ ಸ್ಪರ್ಧೆಯ ಪ್ರಾಯೋಜಕತ್ವ ವಹಿಸಿದ್ದ ವೆಂಕಟೇಶ ಅಶೋಕ ಕಾಟವೆ ಅವರು ಮಾತನಾಡಿ, ಈ ಸ್ಪರ್ಧೆಯು ಯುವ ಸಮೂಹಕ್ಕೆ ಪ್ರೇರಣಾದಾಯಕವಾಗಿದೆ. ಇಂತಹ ಉತ್ತಮ ಕಾರ್ಯಕ್ರಮಕ್ಕೆ ನಮ್ಮ ಸಂಸ್ಥೆ ಸಹಕಾರ ನೀಡಿರುವುದು ಹೆಮ್ಮೆ ಎನಿಸುತ್ತದೆ ಎಂದರು.

ಎಚ್. ಈಶ್ವರಪ್ಪ ಹಾಗೂ ಸಂಗಡಿಗರು ಪ್ರಾರ್ಥನೆ ಹಾಡಿದರು. ವಿಜಯವಾಣಿ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಉಪಸಂಪಾದಕ ಗಜಾನನ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು ವಿಭಾಗದ ಪ್ರಧಾನ ವ್ಯವಸ್ಥಾಪಕ ಶಿವಾಜಿ ಬಿಸೆ, ಹುಬ್ಬಳ್ಳಿಯ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ, ಗೌರವ ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಡಾ. ಚಿದಾನಂದ ತೆಗ್ಗಿಹಳ್ಳಿ, ಎಂ.ಎಂ. ಡಂಬಳ, ಅನಿಲ ಕವಿಶೆಟ್ಟಿ, ಹರೀಶ ಬರಾಡೆ, ಸಚಿನ್ ಕಂಗಳೇಕರ, ಮೃತ್ಯುಂಜಯ ಕಮಡೊಳ್ಳಿಶೆಟ್ರು, ಈಶ್ವರ ನಾಯ್ಕರ್, ಸಾಧನಾ ಪೂಜಾರ, ರೇಖಾ ಅಪ್ಟೆ, ನಿರ್ಮಲಾ ಸಬರದ, ಚೈತ್ರಾ ಇಜಾರಿ ಇತರರು ಪಾಲ್ಗೊಂಡಿದ್ದರು.

ಬಹುಮಾನ ವಿಜೇತ ಸಮಿತಿಗಳು: ಉತ್ತಮ ವಿಗ್ರಹ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಹುಬ್ಬಳ್ಳಿಯ ವಿಕ್ಟೋರಿಯಾ ರೋಡ್ ಸಾಲ ಓಣಿಯ ಶ್ರೀ ಗಜಾನನ ಉತ್ಸವ ಸಮಿತಿ, ದ್ವೀತಿಯ ಬಹುಮಾನ ಧಾರವಾಡದ ಹೊಸಯಲ್ಲಾಪುರ ಕೋಳಿಕೇರಿಯ ಶ್ರೀ ಮಾರುತಿ ಯುವಕ ಮಂಡಳಿ, ತೃತೀಯ ಬಹುಮಾನ ಹುಬ್ಬಳ್ಳಿಯ ಬಾರದಾನ ಸಾಲ ಶ್ರೀ ಗಜಾನನ ಉತ್ಸವ ಸಮಿತಿಯವರು ಪಡೆದುಕೊಂಡವರು.

ವಿಗ್ರಹ ವಿಭಾಗದ ಸಮಾಧಾನಕರ ಬಹುಮಾನವನ್ನು ಹುಬ್ಬಳ್ಳಿಯ ಹಾನಗಲ್ಲ ಚಾಳ ಶ್ರೀ ಗಣೇಶ ಉತ್ಸವ ಸಮಿತಿಯ ವಿವೇಕಾನಂದ ಯೂಥ್ ಕ್ಲಬ್, ಹಳೇಹುಬ್ಬಳ್ಳಿ ನವಅಯೋಧ್ಯಾನಗರದ ಶ್ರೀ ವೀರ ಕಕ್ಕಯ್ಯ ಗಜಾನನೋತ್ಸವ ಮಂಡಳ, ಧಾರವಾಡದ ಸೈದಾಪುರ ಹೊಸ ಓಣಿಯ ಶ್ರೀ ಕಲ್ಮೇಶ್ವರ ಯುವಕ ಮಂಡಳಿ, ಹುಬ್ಬಳ್ಳಿ ಮರಾಠಾ ಗಲ್ಲಿಯ ಶ್ರೀ ಗಣೇಶ ಉತ್ಸವ ಸಮಿತಿಯವರು ಪಡೆದುಕೊಂಡರು.

ಉತ್ತಮ ಅಲಂಕಾರ ವಿಭಾಗದಲ್ಲಿ ಮೊದಲ ಬಹುಮಾನವನ್ನು ಹುಬ್ಬಳ್ಳಿಯ ಚಂದ್ರಕಲಾ ಟಾಕೀಸ್ ಶ್ರೀ ಗಜಾನನ ಉತ್ಸವ ಮಂಡಳಿ ಸ್ಟೇಶನ್ ರೋಡ್, ಎರಡನೇ ಬಹುಮಾನ ಧಾರವಾಡದ ಅಡಿಕೆ ಓಣಿಯ ಶ್ರೀ ಬಸವೇಶ್ವರ ಯುವಕ ಮಂಡಳಿ, ತೃತೀಯ ಬಹುಮಾನ ಹುಬ್ಬಳ್ಳಿಯ ವಿದ್ಯಾನಗರ ಹಿಪ್ಪರಗಿ ಬಿಲ್ಡಿಂಗ್ ಬಳಿಯ ಬಾಲ ಗಜಾನನ ಯುವಕ ಮಂಡಳಿಯವರು ಪಡೆದುಕೊಂಡರು.

ಸಮಾಧಾನಕರ ಬಹುಮಾನವನ್ನು ಹುಬ್ಬಳ್ಳಿಯ ಶ್ರೀ ಗಣೇಶೋತ್ಸವ ಮಂಡಳಿ ಸರಾ್ ಗಟ್ಟಿ, ಹಿರೇಪೇಟ ಭೂಸಪೇಟ ಕಂಚಗಾರ ಓಣಿಯ ಶ್ರೀ ಗಣೇಶ ಉತ್ಸವ ಮಂಡಳಿ, ಬಾಬಾಸಾನ ಗಲ್ಲಿಯ ಶ್ರೀ ಗಜಾನನ ಉತ್ಸವ ಯುವಕ ಮಂಡಳ, ಕಮಡೊಳ್ಳಿ, ಕುಬಸದ ಗಲ್ಲಿಯ ಶ್ರೀ ಗಜಾನನ ಉತ್ಸವ ಸಮಿತಿ ಹಾಗೂ ಧಾರವಾಡದ ಸೂಪರ್ ಮಾರ್ಕೆಟ್ನ ಶ್ರೀ ಗಜಾನನ ಉತ್ಸವ ಸಮಿತಿಯವರು ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net