ಶ್ರೀ ಕ್ಷೇತ್ರ ಮಂದಾರ್ತಿಯಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ

naga mandala
ಶನಿವಾರ ನಡೆದ ಅಷ್ಟಪವಿತ್ರ ನಾಗಮಂಡಲೋತ್ಸವ ಪೂಜೆ.
Published on

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ ಶನಿವಾರ ಶ್ರೀ ಕ್ಷೇತ್ರ ಮಂದಾರ್ತಿಯಲ್ಲಿ ಜರುಗಿತು.

ಶುಕ್ರವಾರ ಬೆಳಗ್ಗೆ ಅಮ್ಮನವರಿಗೆ ಪಂಚವಿಂಶತಿ ದ್ರವ್ಯಕಲಶ, ಅಧಿವಾಸ ಹೋಮ, ದುರ್ಗಾ ಹೋಮ, ಕಲಶಾಭಿಷೇಕ, ಮಹಾಪೂಜೆ, ನಾಗದೇವರಿಗೆ ಪವಮಾನ ಕಲಶಾಭಿಷೇಕ, ರಾತ್ರಿ ನಾಗಮಂಡಲ ಚಪ್ಪರದಲ್ಲಿ ರಾಕ್ಷೋಘ್ನ ಹೋಮ, ವಾಸ್ತುಪೂಜೆ, ಪೂಜಾಬಲಿ, ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷಾಬಲಿ ಪೂಜಾ ಕಾರ್ಯಕ್ರಮ ಜರುಗಿತು.

ಶನಿವಾರ ಬೆಳಗ್ಗೆ ಗಣಪತಿ ಹೋಮ, ನವಗ್ರಹ ಹೋಮ, ತಿಲಹೋಮ, ಕೂಷ್ಮಾಂಡ ಹೋಮ, ಪವಮಾನ ಹೋಮ, ಶ್ರೀ ಸೂಕ್ತ ಹೋಮ, ಸುಕೃತ ಹೋಮ, ಆಶ್ಲೇಷಾ ಬಲಿ ಉದ್ಯಾಪನಾ ಹೋಮ, ಸ್ಕಂದ ಸೂಕ್ತ ಹೋಮ, ನಾಗಯಕ್ಷೀ ಹೋಮ, ತತ್ವಹೋಮ, ಬ್ರಹ್ಮಕಲಶ ಸ್ಥಾಪನೆ, ಪ್ರಧಾನ ಅಧಿವಾಸ ಹೋಮ, ಚತುರ್ವೇದ ಪಾರಾಯಣ, ವಟು ಆರಾಧನೆ, ಬ್ರಾಹ್ಮಣರ ಆರಾಧನೆ, ದಂಪತಿ ಪೂಜೆ, ಆಚಾರ್ಯ ಪೂಜೆ, ಕನ್ನಿಕಾ ಪೂಜೆ, ಸುವಾಸಿನಿ ಪೂಜೆ, ಮಹಾಮಂಗಳಾರತಿ, ನಾಗದರ್ಶನ, ಪಲ್ಲಪೂಜೆ, ಮಹಾಪ್ರಸಾದ ವಿತರಣೆ, ಮಹಾಅನ್ನಸಂತರ್ಪಣೆ ಮುಂತಾದ ಕಾರ್ಯಕ್ರಮಗಳು ನಡೆಯಿತು.

ದೇವಸ್ಥಾನದ ಅಧ್ಯಕ್ಷ ಎಚ್.ಧನಂಜಯ ಶೆಟ್ಟಿ, ಸಹ ಮೊಕ್ತೇಸರರು, ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಪಿ., ಹೆಗ್ಗುಂಜೆ ನಾಲ್ಕು ಮನೆಯವರು, ನಾಗಮಂಡಲ ಸಮಿತಿ ಸರ್ವಸದಸ್ಯರು, ದೇವಳದ ತಂತ್ರಿಗಳು, ಅರ್ಚಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಸಹಸ್ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net