ಸುಬ್ರಹ್ಮಣ್ಯ ದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ : ಅನಿರೀಕ್ಷಿತವಾಗಿ ಆಗಮಿಸಿದ ಎಡನೀರು ಶ್ರೀ

New Project (18)
Published on

ಉಪ್ಪಿನಂಗಡಿ: ಪದಾಳ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಸೋಮವಾರ ಸುಬ್ರಹ್ಮಣ್ಯ ದೇವರಿಗೆ ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಕೆಮ್ಮಿಂಜೆ ಕಾರ್ತಿಕ್ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂಧ ಕ್ರಿಯೆ, ಬ್ರಹ್ಮಕಲಶಾಭಿಷೇಕ ನಡೆಯಿತು.

ಬೆಳಗ್ಗೆ 5.30ರಿಂದ ದೇವಾಲಯದಲ್ಲಿ ಗಣಪತಿ ಹೋಮದೊಂದಿಗೆ ಆರಂಭಗೊಂಡ ವೈದಿಕ ಕಾರ್ಯಕ್ರಮಗಳ ಮಧ್ಯೆ ಕಲಶ ಗೋಪುರದಲ್ಲಿ ಪೂಜಿಸಲ್ಪಟ್ಟ ಕಲಶಗಳಿಂದ ದೇವರಿಗೆ ಬ್ರಹ್ಮಕಲಶದ ವಿಧಿವಿಧಾನಗಳು ನೆರವೇರಿದವು. ಮಧ್ಯಾಹ್ನ 12ಕ್ಕೆ ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಿತು.

ರಾತ್ರಿ ದೇವರಿಗೆ ಮಹಾಪೂಜೆಯಾಗಿ, ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆದು ಪ್ರಸಾದ ಭೋಜನ ನಡೆಯಿತು.

ಎಡನೀರು ಮಠಾಧೀಶರ ಭೇಟಿ: ಬ್ರಹ್ಮಕಲಶೋತ್ಸವದ ವಿಧಿವಿಧಾನಗಳು ನೆರವೇರುತ್ತಿದ್ದಂತೆಯೇ ಯಾವುದೇ ಪೂರ್ವ ಸೂಚನೆ ಇಲ್ಲದೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ದೇವಾಲಯಕ್ಕೆ ಆಗಮಿಸಿ ಆಶೀರ್ವಚನ ನೀಡಿ, ಶುದ್ಧ ಭಕ್ತಿ ಸಮರ್ಪಣಾ ಭಾವ ಭಗವಂತನ ಒಲುಮೆ ಗಳಿಸಲು ಇರುವ ಏಕೈಕ ಮಾರ್ಗವಾಗಿದ್ದು, ಬ್ರಹ್ಮಕಲಶೋತ್ಸವದ ಕಾರಣದಿಂದ ಕ್ಷೇತ್ರದಲ್ಲಿ ದೇವರ ಸಾನ್ನಿಧ್ಯ ವೃದ್ಧಿಸಿ ಭಕ್ತ ಸಮುದಾಯದ ಸರ್ವತೋಮುಖ ಅಭಿವೃದ್ಧಿಯಾಗಲಿದೆ ಎಂದರು.

ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ಉದಯ ಶಂಕರ ಭಟ್ಟ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಜಗದೀಶ್ ರಾವ್ ಮಣಿಕ್ಕಳ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ನಟೇಶ್ ಪೂಜಾರಿ ಪುಳಿತ್ತಡಿ, ಚಂದಪ್ಪ ಮೂಲ್ಯ, ಡಾ.ರಾಜಾರಾಮ ಕೆ.ಬಿ., ಪ್ರತಾಪ್ ಯು. ಪೆರಿಯಡ್ಕ, ಉಷಾಚಂದ್ರ ಮುಳಿಯ, ಕೋಶಾಧಿಕಾರಿ ರಾಮಚಂದ್ರ ಮಣಿಯಾಣಿ, ಸುರೇಶ್ ಅತ್ರಮಜಲು, ಜಯಗೋವಿಂದ ಶರ್ಮ, ಶಾಂಭವಿ ರೈ, ಕಂಗ್ವೆ ವಿಶ್ವನಾಥ ಶೆಟ್ಟಿ, ಸುನೀಲ್ ಕುಮಾರ್ ದಡ್ಡು, ಹರೀಶ್ವರ ಮೊಗ್ರಾಲ್, ವೆಂಕಪ್ಪ ಪೂಜಾರಿ, ಶಂಕರನಾರಾಯಣ ಭಟ್ ಬೊಳ್ಳಾವು, ಲೋಕೇಶ್ ಬೆತ್ತೋಡಿ, ಪ್ರಶಾಂತ್ ಯು., ಬಿ.ರಾಧಾಕೃಷ್ಣ ಭಟ್ ಬೊಳ್ಳಾವು, ಜಯಂತ ಪೊರೋಳಿ, ಕೃಷ್ಣಪ್ಪ ಗೌಡ ಬೊಳ್ಳಾವು, ಬಿ.ಜಗದೀಶ್ ಪರಕ್ಕಜೆ, ಶೀನಪ್ಪ ಗೌಡ, ಪ್ರಸನ್ನ ಪೆರಿಯಡ್ಕ, ನೋಣಯ್ಯ ಗೌಡ, ಭವ್ಯ ನಿತಿನ್, ಶೇಖರ್ ಪಂಚೇರು, ದೀಪಕ್ ಬೊಳ್ಳಾವು, ಜತ್ತಪ್ಪ ನಾಯ್ಕ, ನವೀನ್ ಕುಮಾರ್ ಕಲ್ಯಾಟೆ, ಚಿದಾನಂದ ಪಂಛೇರು, ಹೊನ್ನಪ್ಪ ಗೌಡ ವರೆಕ್ಕಾ, ಶಂಕರ್ ಜಯವೇಲು, ಅರ್ಜುನ್ ಸಿಂಗ್ ಮೊದಲಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net