

ಹುಬ್ಬಳ್ಳಿ: ನಗರದ ಹೃದಯ ಭಾಗವಾದ ಕೋಯಿನ್ ರಸ್ತೆಯಲ್ಲಿರುವ ಲಕ್ಷ್ಮೀ ಮಾಲ್ ನಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣವಾಗಿರುವ ನೂತನ "ಹೋಟೆಲ್ ಆಶ್ರಯ ಇನ್' ಪ್ರವಾಸಿಗರು, ಗ್ರಾಹಕರ ಮನ ತಣಿಸುತ್ತಿದೆ.
ಹೋಟೆಲ್ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಾಲೀಕರಾದ ಅಮರನಾಥ ಚಾಟ್ನಿ ಅವರು, 46 ಸುಸಜ್ಜಿತ ಕೊಠಡಿಗಳನ್ನು ಹೊಂದಿರುವ ಹೋಟೆಲ್ ನಲ್ಲಿ ಐಷಾರಾಮಿ ವಾಸ್ತವ್ಯ ಬಯಸುವವರಿಗೆ ಸಕಲ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.
ಗ್ರಾಹಕರ ವಾಹನಗಳಿಗೆ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಇದ್ದು, ಕೊಠಡಿ ಮತ್ತು ಸೂಟ್ ಗಳಲ್ಲಿ ಆಧುನಿಕ ಐಷಾರಾಮಿ ಮತ್ತು ಮನೆಯಂತಹ ಸೌಕರ್ಯದ ಪರಿಪೂರ್ಣ ಅನುಭವ ನೀಡುವಂತೆ ರೂಪಿಸಲಾಗಿದೆ.
ಸ್ವಾದಿಷ್ಟ ಮತ್ತು ರುಚಿಕರ ಭೋಜನದ ಅನುಭವ ನೀಡಲು ನುರಿತ ಬಾಣಸಿಗರಿಂದ ಅಡುಗೆ ತಯಾರಿಸಲಾಗುತ್ತದೆ. ಸ್ಥಳಿಯ ಹಾಗೂ ಜಾಗತಿಕ ರಚಿಗಳು, ಕ್ಯುರೇಟೆಡ್ ವಿಶೇಷ ಭಕ್ಷ್ಯಗಳು, ಸಸ್ಯಾಹಾರಿ, ಮಾಂಸಾಹಾರಿ ಅಡುಗೆಗೆ ಪ್ರತ್ಯೇಕ ಅಡುಗೆ ಮನೆಗಳನ್ನು ನಿರ್ಮಿಸಲಾಗಿದೆ ಎಂದರು.
ಅತ್ಯಾಧುನಿಕ ವಾತಾವರಣ ಹೊಂದಿರುವ ಫೈನ್ ಡೈನ್ ಮತ್ತು ಬಾರ್, ನಗರದ ವಿಹಂಗಮ ನೋಟವನ್ನು ಅನುಭವಿಸುತ್ತ ಲಖನೌ ವೀ ಗೆಹಲೋಟಿ ಕಬಾಬ, ಮಟನ್ ಯಾಕ್ನಿ ಶೋರ್ಬಾ, ಚಿಕನ್ ದಂ ಬಿರಿಯಾನಿ, ಮಟನ್, ಸ್ಮೋಕ್ ವೆಜ್ ಸಲಾಡ್, ಚೀಜಿ ಕರಮ್ ಕುರ್ರೆ ಮುಂತಾದ ವೈವಿಧ್ಯಮಯ ಆಹಾರಗಳು ಗಮನ ಸೆಳೆಯುತ್ತವೆ.
ಆಹಾರ ಮತ್ತು ಪಾನೀಯ, ಸರ್ವ ಋತುಗಳಲ್ಲಿ ಸವಿಯಲು ವಿನೂತನ, ವಿಶಾಲ ಸ್ಕೈ ಲಾಂಜ್ ಬಾರ್ ವಿಶೇಷವಾಗಿದೆ. ಸಭೆ, ಸಮಾರಂಭ, ಮದುವೆ, ನಿಶ್ಚಿತಾರ್ಥ, ಕಾರ್ಪೋರೇಟ್ ಕಾರ್ಯಕ್ರಮಗಳನ್ನು ಆಯೋಜಿಸಲು ಅತ್ಯಾಧುನಿಕ ಸವಲತ್ತುಗಳನ್ನು ಒಳಗೊಂಡ ಔರಾ, ಅಮ್ರೀತ, ಅಭಿನಂದನ್ ಹೆಸರಿನ ಹವಾನಿಯಂತ್ರಿತ ಬಾಂಕ್ವೆಟ್ ಹಾಲ್ ಗಳು ಲಭ್ಯ ಇವೆ. ರೈಲು ನಿಲ್ದಾಣ, ಬಸ್ ನಿಲ್ದಾಣ, ವಿಮಾನ ನಿಲ್ದಾಣಗಳಿಂದ ಅತ್ಯಂತ ಕಡಿಮೆ ಅಂತರದಲ್ಲಿ ಇರುವ ಹೋಟೆಲ್ ಗೆ ಸುಲಭವಾಗಿ ತಲುಪಬಹುದು ಎನ್ನುತ್ತಾರೆ ಅವರು.
ಒಂದೇ ಸೂರಿನಡಿ ಮನೋರಂಜನೆ, ಆತಿಥ್ಯ ಸೇರಿ ಹಲವು ಅನುಕೂಲಗಳನ್ನು ಪಡೆಯಬಹುದು. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ದಶಕಗಳ ಅನುಭವ ಹೊಂದಿರುವ ಚಾಟ್ನಿ ಅವರು ಇದೇ ಮೊದಲ ಬಾರಿ ಹೋಟೆಲ್ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಕನ್ಸಲ್ಟಂಟ್ ಅರುಣ ಸವದತ್ತಿ, ವಿನಾಯಕ ಚಾಟ್ನಿ, ಸತೀಶ, ವಿಜಯ, ಅಮಿತ, ವಿನಿತ ಗೋಷ್ಠಿಯಲ್ಲಿದ್ದರು.