ವಲಯ-1ರ ಪರವಾನಗಿಗೆ ಕಾಲಾವಕಾಶ ನೀಡಿ

Auto Lead
Published on

ಆಶ್ರಯದಾತ ಆಟೋ ಯೂನಿಯನ್​ ಒತ್ತಾಯ

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿಯಲ್ಲಿನ ಆಟೋಗಳಿಗೆ ವಲಯ-1ರ ಪರವಾನಗಿ ಅಳವಡಿಸಿಕೊಳ್ಳಲು ಜಿಲ್ಲಾಡಳಿತ ಮೂರು ತಿಂಗಳ ಕಾಲಾವಕಾಶ ನೀಡಬೇಕು ಎಂದು ಆಶ್ರಯದಾತ ಆಟೋ ಯೂನಿಯನ್​ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡಬೆಟ್ಟು ಒತ್ತಾಯಿಸಿದರು.

ಉಡುಪಿಯ ಪತ್ರಿಕಾ ಭವನದಲ್ಲಿ ಶುಕ್ರವಾರ (ನ.7) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಡುಪಿಯ ಆಟೋ ಮತ್ತು ನಿಲ್ದಾಣಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಮಾಡಿರುವ ಹೊಸ ನಡಾವಳಿಯಲ್ಲಿ ಕೆಲವು ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದರು.

Auto
ಶಿವಾನಂದ

ಆಟೋ ನಿಲ್ದಾಣಗಳು ಉಡುಪಿ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಇದೆ. ಹೀಗಾಗಿ ವಲಯ-1ರಲ್ಲಿ ನಗರ ವ್ಯಾಪ್ತಿಯ ವಾಸ್ತವ್ಯ ದೃಢೀಕರಣ ಪತ್ರ ಮತ್ತು ಪಡಿತರ ಚೀಟಿ ಹೊಂದಿರುವ ಆಟೋ ಚಾಲಕರಿಗೆ ಮಾತ್ರ ಅವಕಾಶ ಕಲ್ಪಿಸಬೇಕು ಎಂದರು. ನಗರ ಪರವಾನಗಿ ಹೊಂದಿರುವ ಆಟೋ ಚಾಲಕರಿಗೆ ಒಂದೇ ನಿಲ್ದಾಣದಲ್ಲಿ ಮಾತ್ರ ಸದಸ್ಯತ್ವ ನೀಡಬೇಕು. ಸಂಬಂಧಪಟ್ಟ ಇಲಾಖೆಯ ಪರವಾನಗಿ, ಬ್ಯಾಚ್​ ಮತ್ತು ವಲಯ ಪರವಾನಗಿ ಹೊಂದಿರುವ ಚಾಲಕರಿಗೆ ದುಡಿಯುವ ಸಮಯ ನಿಗದಿ ಮಾಡಬಾರದು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಯೂನಿಯನ್​ನ ಎಂ.ಹನೀಫ್​, ವಿಠ್ಠಲ, ನಾಗರಾಜ, ಸತೀಶ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net