ಯೋಗದಿಂದ ವಿವೇಚನಾಯುಕ್ತ ಜೀವನ ಎಸ್. ಸಿ. ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ

mng--25 June Scs college yoga
Published on

ಮಂಗಳೂರು: ಅಶೋಕನಗರದಲ್ಲಿರುವ ಎಸ್ ಸಿ ಎಸ್ ಪದವಿ ಪೂರ್ವ ಕಾಲೇಜಿನಲ್ಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಿಸಲಾಯಿತು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇಲ್ಲಿನ ಶಾಖ ಸಂಚಾಲಕರು ಹಾಗೂ ಯೋಗ ಶಿಕ್ಷಕ ಮಂಜುನಾಥ್ ಕೆ.ಎನ್ ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಬಳಿಕ ಉಸಿರಾಟದ ಜೋಡಣೆಯೊಂದಿಗೆ ಮಾನಸಿಕ ಸ್ಥಿರತೆ ಹಾಗೂ ಸಾಧನಾತ್ಮಕ ನಡುಗೆ ಯೋಗದಿಂದ ಸಾಧ್ಯ ಎಂದು ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು.


ಪಿ.ಯು ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಾರಾಮ್ ರಾವ್ ಮಾತನಾಡಿ,ಯೋಗದಿಂದ ಮಾನಸಿಕ ಸ್ಥಿರತೆ ಹಾಗೂ ವಿವೇಚನಯುತವಾದ ಜೀವನ ಸಾಧ್ಯ ಎಂದರು.


ಎಸ್. ಸಿ. ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ವಹಣಾಧಿಕಾರಿ ಯು.ಕೆ ಖಾಲಿದ್ ಮಾತನಾಡಿ,ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾದ ವ್ಯಕ್ತಿ ಮಾತ್ರ ಸ್ವಸ್ಥ ಸಮಾಜವನ್ನು ನಿರ್ಮಿಸಬಲ್ಲ. ಇದು ಯೋಗದಿಂದ ಸಾಧ್ಯ ಎಂದರು.


ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್, ಅಷ್ಟಾವಧಾನಿ ದ್ವಂದ್ವಗಳನ್ನು ಒಪ್ಪಿಕೊಂಡು ಬದುಕನ್ನು ಸಜ್ಜುಗೊಳಿಸುವ ಕ್ರಿಯೆಯೇ ಯೋಗ ಎಂದು ಯೋಗಾರ್ಥಿಗಳಿಗೆ ಚಿಂತನಾತ್ಮಕ ನಿರೂಪಣೆ ನೀಡಿದರು.


ಕಾಲೇಜಿನ ಅಧ್ಯಕ್ಷ ಡಾ. ರಜನೀಶ್ ಸೊರಕೆ ಸಾಂದರ್ಭಿಕವಾಗಿ ಮಾತನಾಡಿದರು. ರಮೇಶ್ ಪೂಜಾರಿ, ಶ್ರೀಕಲಾ ಸುವರ್ಣ, ನವ್ಯ ಹಾಗೂ ಯಶೋದ ಉಪಸ್ಥಿತರಿದ್ದರು.


ದ್ವಿತೀಯ ಪಿಯು ವಿದ್ಯಾರ್ಥಿನಿ ಶ್ರೀರಂಜನಿ ಎಂ.ಜಿ ಪ್ರಾರ್ಥಿಸಿದರು. ಪ್ರಥಮ ಪಿಯು ವಿದ್ಯಾರ್ಥಿನಿ ಜಝೀಲಾ ಸ್ವಾಗತಿಸಿದರು. ದ್ವಿತೀಯ ಪಿಯು ವಿದ್ಯಾರ್ಥಿ ವೈಶಾಖ್ ಕೆ .ರಾವ್ ಅತಿಥಿಗಳ ಪರಿಚಯ ಮಾಡಿದರು. ಪ್ರಥಮ ಪಿಯು ವಿಭಾಗದ ವಿದ್ಯಾರ್ಥಿ ಮೋಹಿತ್ .ಎಚ್ .ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net