ಹುಬ್ಬಳ್ಳಿ: ಇಲ್ಲಿಯ ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 39 ಮತ್ತು 41ರ ಪ್ರಗತಿ ಪರಿಶೀಲನೆ ಸಭೆಯು ಶಾಸಕ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ವಿಶ್ವೇಶ್ವರ ನಗರದ ಉದ್ಯಾನದಲ್ಲಿ ಶನಿವಾರ ನಡೆಯಿತು.
ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ಶಾಸಕರು, ಅಶೋಕನಗರ ರೈಲ್ವೆ ಸೇತುವೆಯಿಂದ ಶಕ್ತಿ ಕಾಲನಿವರೆಗಿನ ಸಿಮೆಂಟ್ ರಸ್ತೆಯ ಎರಡು ಪ್ಯಾಕೇಜ್ಗಳಿವೆ. 2.4 ಕಿಲೋ ಮಿಟರ್ ಉದ್ದದ ರಸ್ತೆಯನ್ನು ಮಾರ್ಚ್ 31ರೊಳಗೆ ರ್ಪೂಣಗೊಳಿಸಬೇಕು ಎಂದು ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು.
ಈ ಕಾಮಗಾರಿಗೆ ಈಗಾಗಲೇ ಹಣ ನೀಡಲಾಗಿದೆ. ಕಾಮಗಾರಿ ರ್ಪೂತಿಗೊಳಿಸಲು ಯಾವುದೇ ಸಮಸ್ಯೆಗಳಿಲ್ಲ. ಈ ರಸ್ತೆಯು ಉತ್ತಮ ಗುಣಮಟ್ಟದಿಂದ ಕೂಡಿರಬೇಕು ಎಂದು ಗುತ್ತಿಗೆದಾರರಿಗೆ ಹೇಳಿದರು.
ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಶಾಸಕರು ಈ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿ 5ನೇ ಸಭೆ ಇದೀಗ ನಡೆಸಿದ್ದಾರೆ. ಹಾಗಾಗಿ ಅಧಿಕಾರಿಗಳು ಇದನ್ನು ಗಂಭೀರವಾಗಿ ತೆಗೆದುಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.
ಎಲ್ ಆ್ಯಂಡ್ ಟಿ ಕಂಪನಿಯ ಕಾಮಗಾರಿಯು ಈಗ ರ್ಪೂಣಗೊಂಡಿದ್ದು, ಇನ್ನೇನು ರಸ್ತೆ ಕಾಮಗಾರಿಯು ಸುಲಭವಾಗಲಿದೆ ಎಂದರು.
ಮಾಜಿ ಮೇಯರ್ ವೀರಣ್ಣ ಸವಡಿ, ಪಾಲಿಗೆ ಸದಸ್ಯರಾದ ಸಂತೋಷ್ ಚೌಹಾಣ್, ಬೀರಪ್ಪ ಖಂಡೇಕರ್, ಬಿಜೆಪಿ ಮುಖಂಡ ಸಿದ್ದು ಮೊಗಲಿಶೆಟ್ಟರ್, ಪಾಲಿಕೆ ನೋಡಲ್ ಅಧಿಕಾರಿ ವಿಠ್ಠಲ ತುಬಾಕೆ, ಎಸ್.ಸಿ. ಬೇವೂರ, ಬಿಜೆಪಿ ವಕ್ತಾರ ರವಿ ನಾಯಕ, ಅಧಿಕಾರಿಗಳು, ಬಡಾವಣೆಯ ಗಣ್ಯರು, ಮಹಿಳೆಯರು ಉಪಸ್ಥಿತರಿದ್ದರು.