

ಮಸ್ಕಿ: ಪಟ್ಟಣದಲ್ಲಿರುವ ಅಶೋಕ ಶಿಲಾಶಾಸನ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಹೇಳಿದರು. ಪಟ್ಟಣದ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸನ ಪ್ರದೇಶದಲ್ಲಿ ಉದ್ಯಾನ ನಿರ್ಮಾಣ ಮಾಡುವುದರೊಂದಿಗೆ ಪಟ್ಟಣಕ್ಕೆ ಸಂಬಧಿಸಿದ ಐತಿಹಾಸಿಕ ಕುರುಹುಗಳ ಸಂಗ್ರಹಕ್ಕಾಗಿ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳೊಂದಿಗೆ ಶೀಘ್ರ ಚರ್ಚಿಸುವುದಾಗಿ ತಿಳಿಸಿದರು.