ಅಶೋಕ ಗಸ್ತಿ ಮಾನವೀಯತೆಯ ಮನುಷ್ಯ

27092020 Karatagi Ashok Gasti
Published on

ಕಾರಟಗಿ: ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ಮಾನವೀಯ ಗುಣಗಳುಳ್ಳ ವ್ಯಕ್ತಿ ಎಂದು ಸವಿತಾ ಸಮುದಾಯದ ಮುಖಂಡ ರಾಮಾಂಜನೇಯ ಹೇಳಿದರು.

ಪಟ್ಟಣದ ಕೆರೆ ಬಸವೇಶ್ವರ ಕಾಲೇಜು ಆವರಣದಲ್ಲಿ ಹಡಪದ ಹಾಗೂ ಸವಿತಾ ಸಮುದಾಯದಿಂದ ಶನಿವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಅಶೋಕ ಗಸ್ತಿ ಅವರು ಉತ್ತಮ ಪಕ್ಷ ಸಂಘಟಕ. ಬಿಜೆಪಿಗೆ ಅವರು ಸಲ್ಲಿಸಿದ ಸೇವೆ ಗುರುತಿಸಿ ಪಕ್ಷ ರಾಜ್ಯಸಭೆಗೆ ಆಯ್ಕೆ ಮಾಡಿತು. ಆದರೆ, ವಿಧಿಯ ಆಟವೇ ಬೇರೆಯಿತ್ತು. ಸಮುದಾಯದ ಅಭಿವೃದ್ದಿ ಹಾಗೂ ಸದ್ಗುಣಗಳೂಳ್ಳ ವ್ಯಕ್ತಿಯನ್ನು ಕಳೆದುಕೊಂಡಿರುವುದು ನೋವಿನ ಸಂಗತಿ ಎಂದರು.

ಸಮುದಾಯದ ಮುಖಂಡರಾದ ಲಿಂಗಪ್ಪ ಚಳ್ಳೂರು, ಎಚ್. ಮಹಾದೇವಪ್ಪ, ಕಲ್ಲಪ್ಪ, ಅಯ್ಯಪ್ಪ, ಶ್ರೀನಿವಾಸ್, ಶ್ರಂಕಪ್ಪ, ಮಹಾಂತೇಶ, ಜಗದೀಶ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net